ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ 'ಬಿಗ್ ಬಾಸ್' ದಿವಾಕರ್..!

ಕಿರುತೆರೆಯಲ್ಲಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಬಿಗ್ ಬಾಸ್ ಮನೆಯಲ್ಲಿದ್ದವರೆಲ್ಲ ಸೆಲಬ್ರೆಟಿಗಳೇ ಆದರೆ, ಈ ಬಾರಿ ಸಾಮಾನ್ಯರಿಗೂ ಕೂಡ ಅವಕಾಶವನ್ನು ನೀಡಿದ್ದರು. ಆದರೆ ಈಗ ಜನ ಸಾಮಾನ್ಯರಾಗಿದ್ದವರು ಕೂಡ ಸೆಲಬ್ರೆಟಿಯಾಗಿದ್ದಾರೆ.ಬಿಗ್ ಬಾಸ್ ಮೂಲಕ ಮನೆ ಮಾತಾದ ಸೇಲ್ಸ್ ಮ್ಯಾನ್ ದಿವಾಕರ್ ಈಗ ಬಣ್ಣದ ಲೋಕದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಎಸ್…ದಿವಾಕರ್ ಸಿನಿಮಾ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಅಭಿನಯಿಸುತ್ತಿರುವ 'ಚಿಲ್ಲಂ' ಚಿತ್ರದಲ್ಲಿ ನಟಿಸುತ್ತಿರುವ ದಿವಾಕರ್ ಈಗ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿದ್ದು, ಇದೇ ಮೊದಲ ಬಾರಿಗೆ ಪೊಲೀಸ್ ಆಫೀಸರ್ ಪಾತ್ರವನ್ನ ನಟಿಸಲಿದ್ದಾರೆ. ಬಣ್ಣದ ಲೋಕದಲ್ಲಿ ದಿವಾಕರ್ ಯಾವ ರೀತಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments