ಕಲರ್ಸ್ ಸೂಪರ್ ನಲ್ಲಿ ಕನ್ನಡ ಬಿಗ್ ಬಾಸ್ 6 ಪ್ರೋಮೊ…ವಿಡಿಯೋ ನೋಡಿ

ಕಲರ್ಸ್ ಸೂಪರ್ ವಾಹಿನಿ ಇತ್ತೀಚೆಗೆ ಬಾರಿ ಸುದ್ದಿಯಲ್ಲಿದೆ. ಹೊಸ ಹೊಸ ಧಾರವಾಹಿಗಳ ಜೊತೆಗೆ ಕನ್ನಡ ಬಿಗ್ ಬಾಸ್ ನ 6ನೇ ಸರಣಿಯೂ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎನ್ನುವ ಸುದ್ದಿ ಈಗಾಗಲೇ ಎಲ್ಲೆಡೆ ಕೇಳಿಬರುತ್ತಿದೆ.
ಇದೇ ನಿಟ್ಟಿನಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಈಗಾಗಲೇ ಕನ್ನಡ ಬಿಗ್ ಬಾಸ್ ಸೀಸನ್ 6ರ ಸರಣಿಯ ಪ್ರೋಮೊ ಬಿಡುಗಡೆಯಾಗಿದೆ. ಹಾಗಾಗಿಯೇ ಬಿಗ್ ಬಾಸ್ ವೀಕ್ಷಕರು ಈಗಲೇ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ, ಯಾವೆಲ್ಲಾ ಸ್ಪರ್ಧಿಗಳು ಏನೆಲ್ಲಾ ಕಾಂಟ್ರವರ್ಸಿಗಳನ್ನು ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಕಾಡ್ತಾ ಇದೆ. ಕಲರ್ಸ್ ಸೂಪರ್ ವಾಹಿನಿ ಬಿಗ್ ಬಾಸ್ ಬಗ್ಗೆ ಯಾವುದೇ ಮಾಹಿತಿಯನ್ನು ರಿವೀಲ್ ಮಾಡಿಲ್ಲ. ಆದರೆ ಕಲರ್ಸ್ ಸೂಪರ್ ವಾಹಿನಿ ಬಿಗ್ ಬಾಸ್ ಸೀಸನ್ 6ನೇ ಸರಣಿಯ ಪ್ರೋಮೊವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಸದ್ಯದಲ್ಲಿಯೇ ಬಿಗ್ ಬಾಸ್ ನಿಮ್ಮ ಮನೆಗೆ ಬರಲಿದೆ.
Comments