ಬಾರದ ಲೋಕಕ್ಕೆ ಪಯಣ ಬೆಳಸಿದ ಹಾಸ್ಯನಟ ಮಲ್ಲೇಶ್

ಕನ್ನಡಚಿತ್ರರಂಗದಲ್ಲಿ ಹ್ಯಾಸದ ಹೊನಲನ್ನು ಹರಿಸಿದವರಲ್ಲಿ ಹಾಸ್ಯನಟ ಮಲ್ಲೇಶ್ ಕೂಡ ಒಬ್ಬರು. ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ತಮ್ಮ ಆನೆಕಲ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸ್ಯಾಂಡಲ್ ವುಡ್ ನ ಹಾಸ್ಯ ನಟರಾದ ಮಲ್ಲೇಶ್ ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 'ವಠಾರ' ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ಹಾಸ್ಯ ನಟ ಮಲ್ಲೇಶ್ ಅವರು ಸರಿ ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದಾರೆ. ಕಿಡ್ನಿ ವೈಫಲ್ಯ ಹಾಗೂ ಸ್ಟ್ರೋಕ್‌ನಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣದಿಂದ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇಂದು ಅವರು ಆನೇಕಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ದರ್ಶನ್ ಅವರ ಜೊತೆ ನಟಿಸಿದ ನಟ ಮಲ್ಲೇಶ್ ಅವರು ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದು ತಮ್ಮ ಜೀವನದ ಕಡೇ ಕ್ಷಣದವರೆಗೂ ದರ್ಶನ್ ನೋಡಲು ಬಯಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.
Comments