ಅಭಿಮಾನಿಯ ಕಾರಿನ ಮೇಲೆ ಆಟೋಗ್ರಾಫ್ ಹಾಕಿದ ಚಾಲೆಂಜಿಂಗ್ ಸ್ಟಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರ್ ಕ್ರೇಜ್ ಇರುವ ವಿಷಯ ಎಲ್ಲರಿಗೂ ಕೂಡ ತಿಳಿದೆ ಇದೆ. ದರ್ಶನ್ ಮನೆಯ ಬಳಿ ಇರುವ ಕಾರುಗಳನ್ನು ನೋಡಿದ್ರೆ ಗೊತ್ತಾಗುತ್ತೆ ದರ್ಶನ್ ಅವರಿಗೆ ಕಾರ್ ಕ್ರೇಜ್ ಇದೆ ಎಂದು ತಿಳಿಯುತ್ತದೆ. ಅಭಿಮಾನಿಗಳು ಖರೀದಿ ಮಾಡಿದ್ದ ಕಾರಿಗೆ ದರ್ಶನ್ ಬಳಿ ಆಟೋಗ್ರಾಫ್ ಹಾಕಿಸಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ.
ಎಸ್… ದರ್ಶನ್ ಅಭಿಮಾನಿ ಇತ್ತೀಚಿಗಷ್ಟೆ ಹೊಸ AudiQ7 ಕಾರನ್ನು ಕೊಂಡುಕೊಂಡಿದ್ದರು. ಅದೇ ರೀತಿ ಅದರ ಮೇಲೆ ದರ್ಶನ್ ಆಟೋಗ್ರಾಫ್ ಇರಬೇಕು ಎನ್ನುವ ಆಸೆಯನ್ನು ಹೊಂದಿದ್ದರು. ಇದೀಗ ಅವರ ಆಸೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಡೆರಿಸಿದ್ದಾರೆ. ಅಭಿಮಾನಿಯ ಕಾರಿನ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿದ್ದಾರೆ. ಹಿಂದೆ ಸಹ ದರ್ಶನ್ ತಮ್ಮ ಮನೆಯ ಮುಂದೆ ಬಂದಿದ್ದ ಅಭಿಮಾನಿಗಳ ಆಟೋಗಳಿಗೆ ಆಟೋಗ್ರಾಫ್ ಕೂಡ ಹಾಕಿದ್ದರು. ಈ ರೀತಿ ದರ್ಶನ್ ಅವರು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಅದೇ ಕಾರಣಕ್ಕೆ ಅಭಿಮಾನಿಗಳು ದರ್ಶನ್ ಗೆ ಇತ್ತೀಚಿಗಷ್ಟೆ 'ಮೊನಾರ್ಕ್ ಆಫ್ ಸ್ಯಾಂಡಲ್ ವುಡ್' (ಸ್ಯಾಂಡಲ್ ವುಡ್ ರಾಜಪ್ರಭುತ್ವದ ಸಾರ್ವಭೌಮ) ಎಂದು ಬಿರುದು ನೀಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ದರ್ಶನ್ ಸ್ಪಂದಿಸುವುದೆ ವಿಶೇಷ..
Comments