ತನಿಖಾಧಿಕಾರಿ ಪಾತ್ರದಲ್ಲಿ ತೆರೆಮೇಲೆ ಮಿಂಚಲಿದ್ದಾರ ರಶ್ಮಿಕಾ ಮಂದಣ್ಣ..!

'ಚಮಕ್' ಚಿತ್ರದ ಸೂಪರ್ ಸಕ್ಸಸ್ ಕಂಡ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಯಜಮಾನ' ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ತೆಲುಗಿನಲ್ಲೂ ಕೂಡ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಇದರ ನಡುವೆ ಕನ್ನಡ ನಿರ್ದೇಶಕರೊಬ್ಬರ ಜೊತೆ ಹೊಸ ಸಿನಿಮಾಗೆ ಸಹಿ ಹಾಕಿರುವ ಕರ್ನಾಟಕ ಕ್ರಶ್ ಗೆ ರಶ್ಮಿಕಾ ಹೊಸಕಥೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆರ್ ಗೌತಮ್ ಐಯ್ಯರ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ 'ವೃತ್ರ' ಎಂದು ಹೆಸರಿಟ್ಟಿದ್ದು, ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ರಿವಿಲ್ ಯಾಗಿದೆ.ರಶ್ಮಿಕಾ ಅವರ 'ವೃತ್ರ' ಚಿತ್ರದ ಫಸ್ಟ್ ಲುಕ್ ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದ ಪೋಸ್ಟರ್ ಗಮನಿಸುತ್ತಿದ್ದರೇ, ಬಾಲಿವುಡ್ ನಲ್ಲಿ ಇತ್ತೀಚಿಗಷ್ಟೆ ಮೂಡಿ ಬಂದಿದ್ದ 'ರಾಝಿ' ಚಿತ್ರದ ನೆನಪು ಬರುತ್ತಿದೆ. ಯಾಕಂದ್ರೆ, 'ವೃತ್ರ' ಚಿತ್ರದಲ್ಲಿ ರಶ್ಮಿಕಾ ತನಿಖಾಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
Comments