ಮತ್ತೆ ಕಿರಾತಕನಾಗಲು ರೆಡಿಯಾದ ಅಣ್ತಮ್ಮ ..!
ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಸಿನಿಮಾದ ತಯಾರಿಯಲ್ಲಿದ್ದಾರೆ. ಕೆಜಿಎಫ್ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಆದರೆ, ಈ ಚಿತ್ರದ ಜೊತೆ ಜೊತೆಗೆ ಈಗ ಯಶ್ ಮತ್ತೆ 'ಕಿರಾತಕ' ಆಗಲು ರೆಡಿಯಾಗಿದ್ದಾರೆ.
‘ರ‍್ಯಾಂಬೋ 2' ಸಿನಿಮಾದ ನಿರ್ದೇಶಕರಾದ ಅನಿಲ್ ಕುಮಾರ್ ರಾಕಿಂಗ್ ಸ್ಟಾರ್ ಯಶ್ ಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಕೂಡ ಇತ್ತಿಚಿಗಷ್ಟೆ ಹಬ್ಬಿತ್ತು. ಆದರೆ, ಈಗ ಈ ಚಿತ್ರಕ್ಕೆ 'ಕಿರಾತಕ 2' ಎಂಬ ಹೆಸರನ್ನು ಇಡಲಾಗಿದೆಯಂತೆ. ಈ ಚಿತ್ರದಲ್ಲಿ ಮತ್ತೆ ಮಂಡ್ಯ ಹುಡುಗನ ಗೆಟಪ್ ನಲ್ಲಿ ಅಣ್ತಮ್ಮನಾಗಿ ರಾಕಿಂಗ್ ಸ್ಟಾರ್ ಯಶ್ ಮಿಂಚಲಿದ್ದಾರಂತೆ. 'ಕಿರಾತಕ' ಸಿನಿಮಾ 2011ರಲ್ಲಿ ಬಿಡುಗಡೆಯಾಗಿದ್ದು, ಯಶ್ ಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಕಿರಾತಕವಾಗಿತ್ತು. ಪ್ರದೀಪ್ ರಾಜ್ ಕಿರಾತಕ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೀಗ ಏಳು ವರ್ಷಗಳ ನಂತರ ಮತ್ತೆ ಅದೇ ಟೈಟಲ್ ನಲ್ಲಿ ಸಿನಿಮಾ ಬರುತ್ತಿದ್ದು ಅಭಿಮಾನಿಗಳು ಮತ್ತೊಮ್ಮೆ ಯಶ್ ಅವರನ್ನು ಮಂಡ್ಯದ ಅಣ್ತಮ್ಮನಾಗಿ ಕಾಣಿಸಿಕೊಳ್ಳಲಿದ್ದಾರೆ.
Comments