ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಜೊತೆ ನಟಿಸಿದ್ದ ಈ ನಾಯಕಿಗೆ ಕ್ಯಾನ್ಸರ್..!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿಸಿದ್ದಂತಹ ನಾಯಕಿ ಸೋನಾಲಿ ಬೇಂದ್ರೆಗೆ ಗೆ ಕ್ಯಾನ್ಸರ್ ಖಾಯಿಲೆ ಬಂದಿದೆಯಂತೆ. ತಮಗೆ ಇರುವಂತಹ ಖಾಯಿಲೆ ಬಗ್ಗೆ ಖುದ್ದು ಸೋನಾಲಿ ಬೇಂದ್ರೆಯವರೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಫೇಸ್ ಬುಕ್ ನಲ್ಲಿ ಕಾಯಿಲೆ ಬಗ್ಗೆ ಬರೆದುಕೊಂಡಿರುವ ಅವರು 'ಜೀವನದಲ್ಲಿ ಕೆಲವೊಮ್ಮೆ ಇದ್ದಕ್ಕಿಂದ್ದತೆ ಕೆಲವು ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ನಾನು ಈಗ ಕ್ಯಾನ್ಸರ್ನಿಂದ ಬಳಲುತ್ತಿದ್ದೇನೆ. ಇದರಿಂದ ನನಗಿಂತ ಹೆಚ್ಚಾಗಿ ನನ್ನ ಕುಟುಂಬದವರೇ ನೋವನ್ನು ಅನುಭವಿಸುತ್ತಿದ್ದಾರೆ. ಆದರೂ ಅವರು ನನ್ನ ಬೆನ್ನುಲುಬಾಗಿ ನಿಂತಿದ್ದಾರೆ. ನ್ಯೂಯಾರ್ಕ್ನಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಈ ಯುದ್ಧದಲ್ಲಿ ಗೆದ್ದು ಬರುತ್ತೇನೆ. ನನ್ನ ಕುಟುಂಬದ ಪ್ರೀತಿ ಮತ್ತು ಆರೈಕೆ ಸದಾ ನನ್ನ ಜೊತೆ ಇರುತ್ತದೆ. ಇದಕ್ಕಾಗಿ ನಾನು ಅವರಿಗೆ ಚಿರಋಣಿ 'ಎಂದು ಸೋನಾಲಿ ಭಾವನಾತ್ಮಕವಾಗಿ ತಿಳಿಸಿದ್ದಾರೆ.
Comments