ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ?

ಇತ್ತಿಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಓಪನ್ ಮಾಡಿ ಬೇಡವಾದುದನ್ನು ಪೋಸ್ಟ್ ಮಾಡುವ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ ಅಂತಹವರಿಗೆಲ್ಲಾ ಪುನೀತ್ ರಾಜ್ ಕುಮಾರ್ ಅನೌನ್ಸ್ ಮೆಂಟ್ ಒಂದನ್ನು ಮಾಡಿದ್ದಾರೆ.
ಟ್ವಿಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಖಾತೆಯೊಂದನ್ನು ತೆರೆಯಲಾಗಿದೆ. @PuneethOfficial ಹೆಸರಿನ ಈ ಟ್ವಿಟರ್ ಖಾತೆ ನಿಜವಾಗಿಯೂ ಪುನೀತ್ ಅವರದ್ದು ಅಂದುಕೊಂಡು ಎಷ್ಟೋ ಜನ ಇದರಲ್ಲಿ ಬರುವ ಮೆಸೇಜ್ ಗಳನ್ನು ನಂಬಿ ರಿಟ್ವೀಟ್, ರಿಪ್ಲೈ ಮಾಡುತ್ತಿದ್ದಾರೆ. ಇದು ಪುನೀತ್ ರಾಜ್ ಕುಮಾರ್ ಅವರ ಅಧಿಕೃತ ಖಾತೆಯಲ್ಲ. ನಿಜ ಏನು ಅಂದ್ರೆ ಪುನೀತ್ ರಾಜ್ ಕುಮಾರ್ ಯಾವುದೇ ಟ್ವಿಟರ್ ಖಾತೆಯನ್ನೇ ಹೊಂದಿಲ್ಲ. ಯಾರೋ ಅವರ ಹೆಸರು ಹೇಳಿಕೊಂಡು ಖಾತೆ ಓಪನ್ ಮಾಡಿ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಪುನೀತ್ ಪರವಾಗಿ ಟ್ವಿಟರ್ ನಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.
Comments