ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಸ್ಟಾರ್ ಪುತ್ರನ ಎಂಟ್ರಿ..!

ಸ್ಯಾಂಡಲ್ ವುಡ್ ಗೆ ಸ್ಟಾರ್ ನಟರ ಮಕ್ಕಳು ಬರೋದು ಹೊಸದೇನಲ್ಲ. ಇದೀಗ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ನಟನ ಪುತ್ರನ ಎಂಟ್ರಿಯಾಗುತ್ತಿದೆ. ನಟ ಶಶಿಕುಮಾರ್ ಮಗ ಆದಿತ್ಯ ಶಶಿಕುಮಾರ್ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಸಿದ್ಧಾರ್ಥ್ ಮರದೆಪ್ಪ ನಿರ್ದೇಶನದ ಮೊದಲ ಚಿತ್ರದೊಂದಿಗೆ ಆದಿತ್ಯ ಶಶಿಕುಮಾರ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ..
ಆದಿತ್ಯ ತಂದೆಯಂತೆ ತಾನು ನಟ ಆಗಬೇಕೆಂದೇ ಹಠ ತೊಟ್ಟು ನಟನೆಯ ಕಲಿಕೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ನಟನೆಗೆ ಬೇಕಾದಂತಹ ತರಬೇತಿಯನ್ನು ಮುಗಿಸಿಕೊಂಡೇ ಕ್ಯಾಮರಾವನ್ನು ಎದುರಿಸಲು ಮುಂದಾಗಿದ್ದಾರೆ,. ಆ ಕಾಲದ ಸ್ಟಾರ್ಗಳ ನಡುವೆ ಶಶಿಕುಮಾರ್ ಸ್ಮಾರ್ಟ್ ಹೀರೋ ಎನಿಸಿಕೊಂಡಿದ್ದು ನಿಜ. ಅವರ ಲುಕ್ಗೆ ತಕ್ಕಂತೆಯೇ ನಿರ್ದೇಶಕ ಸಿದ್ಧಾರ್ಥ್ ಚಿತ್ರಕತೆಯನ್ನು ರೆಡಿ ಮಾಡಿದ್ದಾರೆ. ಅವರ ಜೊತೆಗೆ ಅಪೂರ್ವ ಚಿತ್ರದ ನಾಯಕಿ ಅಪೂರ್ವ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ.
Comments