ರಿಂಗ್ ಬದಲಿಸಿಕೊಂಡ ವರ್ಷದ ಸಂಭ್ರಮಕ್ಕೆ ಕರ್ಣನಿಂದ ಕರ್ನಾಟಕ ಕ್ರಶ್ ಗೆ ಸಿಕ್ತು ಲವ್ ಲೆಟರ್..!

ಕಿರಿಕ್ ಪಾರ್ಟಿ ಚಿತ್ರ ತೆರೆ ಮೇಲೆ ಬಂದಿದ್ದೆ ಬಂದಿದ್ದು ಅಭಿಮಾನಿಗಳಿಗೆ ರಕ್ಷಿತ್ ಶೆಟ್ಟಿಯ ಮೇಲಿದ್ದ ಅಭಿಮಾನ ದುಪ್ಪಟ್ಟಾಯಿತು. ಕರ್ಣ-ಸಾನ್ವಿಯ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ತೆರೆ ಮೇಲಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ಜೋಡಿಯಾಗಲೂ ಈ ಜೋಡಿ ನಿಶ್ಚಯಿಸಿರುವುದು ಎಲ್ಲರಿಗೂ ತಿಳಿದೆ ಇದೆ.
ರಕ್ಷಿತ್ ಶೆಟ್ಟಿ ಹಾಗೂ ರಷ್ಮಿಕಾ ಮಂದಣ್ಣ ನಿಶ್ಚಿತಾರ್ಥ ಆಗಿ ಇಂದಿಗೆ ಒಂದು ವರ್ಷ ಕಳೆದುಹೋಗಿದೆ. ಇದೇ ಸಂಭ್ರಮದಲ್ಲಿ ನಟ ರಕ್ಷಿತ್ ತನ್ನ ಪ್ರೇಯಸಿಗೆ ಸಣ್ಣದೊಂದು ಲವ್ ಲೆಟರ್ ಬರೆದಿದ್ದಾರೆ. ಆನ್ ಸ್ಕ್ರೀನ್ ನಲ್ಲಿ ಇಂಪ್ರೆಸ್ ಮಾಡಿದ್ದ ಈ ಕ್ಯೂಟ್ ಜೋಡಿ ಇನ್ನು ಕೆಲವೇ ದಿನಗಳಲ್ಲಿ ಸಪ್ತಪದಿಯನ್ನು ತುಳಿಯಲಿದ್ದಾರೆ. "ಆಗಲೇ ಒಂದು ವರ್ಷ ಕಳೆದು ಹೋಯ್ತಾ? ನನಗೆ ಇವೆಲ್ಲವೂ ನಿನ್ನೆಯಷ್ಟೇ ಆದ ರೀತಿ ಅನಿಸುತಿದೆ. ನಾನು ಇನ್ನು ನಿನ್ನ ಸುಂದರವಾದ ಔಟ್ ಫಿಟ್ ಗೆ ಮ್ಯಾಚ್ ಆಗುವಂತ ಟೈ ಹುಡುಕುವ ಪ್ರಯತ್ನದಲ್ಲೇ ಇದ್ದೇನೆ ಎಂದೆನಿಸುತ್ತಿದೆ. ಆದರೆ ಇಂದು ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋ ನೋಡುತ್ತಿದ್ದೇವೆ". ನೀನು ಕೊಟ್ಟ ಪ್ರೀತಿ ಅಪಾರ 'ನೀನು ಕೊಟ್ಟ ಪ್ರೀತಿ ಅಪಾರ. ನಿನ್ನ ಜೊತೆ ಕಳೆದ ಪ್ರತಿ ಕ್ಷಣದಲ್ಲಿಯೂ ನಾನು ಸಾಕಷ್ಟು ಸಂಪಾದನೆ ಮಾಡಿದ್ದೇನೆ. ನಿನ್ನಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ನೀನು ನನ್ನ ಜೀವನದಲ್ಲಿ ಸಿಕ್ಕಿರುವ ಅತ್ಯಮೂಲ್ಯವಾದ ವಸ್ತು. ಪ್ರತಿ ದಿನ ಪ್ರತಿ ಕ್ಷಣ ನಿನ್ನನ್ನು ಪ್ರೀತಿ ಮಾಡುತ್ತೇನೆ'. ಎಂದು ರಕ್ಷಿತ್ ಬರೆದಿದ್ದಾರೆ. ಅಭಿಮಾನಿಗಳು ಈ ಜೋಡಿಯ ಮದುವೆಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
Comments