ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಡಿಗೇರಿದೆ ಮತ್ತೊಂದು ಬಿರುದು…!

ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಈ ರೀತಿ ಕರೆಸಿಕೊಳ್ಳುತ್ತಿದ್ದ ದರ್ಶನ್ ತೂಗುದೀಪ್ ಗೆ ಈಗ ಇನ್ನೊಂದು ಹೊಸ ಬಿರುದನ್ನು ನೀಡಲಾಗಿದೆ.
ಚಾಲೆಂಜಿಂಗ್ ದರ್ಶನ್ ಗೆ ಈಗ 'ಮೊನಾರ್ಕ್ ಆಫ್ ಸ್ಯಾಂಡಲ್ ವುಡ್' ಎಂಬ ಹೊಸ ಬಿರುದು ಸಿಕ್ಕಿದೆ. ಅಂದಹಾಗೆ, 'ಮೊನಾರ್ಕ್ ಆಫ್ ಸ್ಯಾಂಡಲ್ ವುಡ್' ಎಂದರೆ 'ಸ್ಯಾಂಡಲ್ ವುಡ್ ರಾಜಪ್ರಭುತ್ವದ ಸಾರ್ವಭೌಮ' ಎಂಬ ಅರ್ಥ ಬರುತ್ತದೆ. ದರ್ಶನ್ ಅಭಿಮಾನಿಗಳ 'ದಿ ಲೆಜೆನ್ಸಿ' ತಂಡದಿಂದ ಈ ಬಿರುದನ್ನು ನೀಡಲಾಗಿದೆ. ವಿಶೇಷವಾಗಿ ಡಿ-ಬಾಸ್ ಅವರ ಸಿನಿಮಾ ಸಾಧನೆ ಹಾಗೂ ಸಮಾಜಮುಖಿ ಕೆಲಸಗಳನ್ನು ಕಂಡು ಅಭಿಮಾಗಳು ಈ ಹೊಸ ಬಿರುದನ್ನು ಕೊಟ್ಟಿದ್ದಾರೆ. ದರ್ಶನ್ ಅವರಿಗೆ ಸನ್ಮಾನ ಮಾಡಿ ಅವರ ಜೊತೆ ಫ್ಯಾನ್ಸ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Comments