ಬಾಲಿವುಡ್ ನಟನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಸುದೀಪ್ ದಂಪತಿ

ಸುದೀಪ್ ದಂಪತಿ ಎಲ್ಲ ಕಾರ್ಯಕ್ರಮಗಳಲ್ಲೂ ಕೂಡ ಜೊತೆ ಜೊತೆಯಾಗಿಯೇ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಸುದೀಪ್ ತಮ್ಮ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರೂ ಕುಟುಂಬದವರ ಜೊತೆ ಪ್ರವಾಸವನ್ನು ಮಾಡಿದ್ದಾರೆ.
ಜೂನ್ 25ರಂದು ಬಾಲಿವುಡ್ ನಟ, ಮಾಡೆಲ್ ಅಫ್ತಾಬ್ ಶಿವದಾಸನಿ ಅವರ ಬರ್ತ್ ಡೇ ಇತ್ತು. ಅವರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಲು ಸುದೀಪ್ ದಂಪತಿ ಸರ್ಬಿಯಾ ದೇಶಕ್ಕೆ ಹೋಗಿ ಬಂದಿದ್ದಾರೆ. ಸರ್ಬಿಯಾ ದೇಶದ ಕ್ವೈಂಟ್ ನಗರವಾದ ಬಿಲ್ ಗ್ರೇಡ್‍ಗೆ ಪ್ರವಾಸವನ್ನು ಬೆಳೆಸಿದ್ದರು. ಸರ್ಬಿಯಾದಲ್ಲಿ ಹಲವು ಪ್ರವಾಸಿ ತಾಣಗಳಿಗೆ ಸುದೀಪ್ ದಂಪತಿ ಭೇಟಿಯನ್ನು ನೀಡಿ ಬಂದಿದ್ದಾರೆ. ಬಳಿಕ ಅಫ್ತಾಬ್ ಶಿವದಾಸನಿ ಅವರನ್ನು ಭೇಟಿ ಮಾಡಿ ಅವರಿಗೆ ಬರ್ತ್ ಡೇ ಸರ್ಪ್ರೈಸ್ ಕೊಟ್ಟಿದ್ದಾರೆ. ಕೇಕ್ ತಂದು ಕಟ್ ಮಾಡಿಸಿ ಬರ್ತ್ ಡೇ ಸೆಲಬ್ರೇಷನ್ ಮಾಡಿದ್ದಾರೆ.
Comments