ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ ಡಬ್ ಸ್ಮಾಶ್ ಬೆಡಗಿ ಪ್ರಶ್ವಿತಾ

ಇದೀಗ ಫೇಸ್ ಬುಕ್, ವಾಟ್ಸ್ ಅಪ್ ಗಳಲ್ಲಿ ಎಷ್ಟೋ ಜನರ ಡಬ್ ಸ್ಮಾಶ್ ಗಳನ್ನು ಮಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹಾಕುತ್ತಲೆ ಇರುತ್ತಾರೆ. ಅದರಲ್ಲಿ ಕೆಲವರು ಮಾತ್ರ ತಮ್ಮ ಡಬ್ ಸ್ಮಾಶ್ ಮೂಲಕ ಫೇಮಸ್ ಆಗಿಬಿಡುತ್ತಾರೆ. ಅದೇ ರೀತಿ ತಮ್ಮ ಮುದ್ದಾದ ಡಬ್ ಸ್ಮಾಶ್ ಗಳಿಂದ ಎಲ್ಲರನ್ನು ಮನ ಗೆದಿದ್ದ ಹುಡುಗಿ ಪ್ರಶ್ವಿತಾ.
ಬೆಂಗಳೂರಿನ ಪುಟ್ಟ ಹುಡುಗಿ ಪ್ರಶ್ವಿತಾ ಡಬ್ ಸ್ಮಾಶ್ ಸಾಮ್ರಾಜ್ಯದ ರಾಣಿ ಆಗಿಬಿಟ್ಟಿದ್ದಾಳೆ. ಇದೀಗ ಈ ಡಬ್ ಸ್ಮಾಶ್ ಸಿನಿಮಾದವರ ಗಮನವನ್ನು ಕೂಡ ಸೆಳೆದಿದೆ. ನಟ ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಪ್ರಶ್ವಿತಾ ಗಿಟ್ಟಿಸಿಕೊಂಡಿದ್ದಾರೆ. '777 ಚಾರ್ಲಿ' ಚಿತ್ರದ ಒಂದು ಪಾತ್ರದಲ್ಲಿ ಪ್ರಶ್ವಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶ್ವಿತಾ ಅವರ ಡಬ್ ಸ್ಮಾಶ್ ಗಳನ್ನು ನೋಡಿ ಇಷ್ಟ ಪಟ್ಟಿದ್ದ '777 ಚಾರ್ಲಿ' ಚಿತ್ರದ ನಿರ್ದೇಶಕ ಕಿರಣ್ ರಾಜ್ ತಮ್ಮ ಸಿನಿಮಾಗೆ ಪ್ರಶ್ವಿತಾರವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಶ್ವಿತಾ ಚಾರ್ಲಿ ಎಂಬ ಶ್ವಾನದ ಜೊತೆಗೆ ಆಟ ಆಡುವ ದೃಶ್ಯಗಳು ಇವೆ ಎಂದು ಹೇಳಲಾಗಿದೆ.
Comments