ದಚ್ಚು ಅಭಿನಯದ 'ಕುರುಕ್ಷೇತ್ರ' ಚಿತ್ರದ ಆಡಿಯೋ ರಿಲೀಸ್‌ಗೆ ಮೂಹೂರ್ತ ಫಿಕ್ಸ್..!!
'ಕುರುಕ್ಷೇತ್ರ' ದರ್ಶನ್ ಅವರ 50ನೇ ಸಿನಿಮಾವಾಗಿದ್ದು, ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಈ ಚಿತ್ರದ ಆಡಿಯೋಗಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಅಂದಹಾಗೆ, ಸಿನಿಮಾ ಹಾಡುಗಳು ಜುಲೈ 29ಕ್ಕೆ ಬಿಡುಗಡೆಯಾಗಲಿದೆ. ಅದ್ದೂರಿ ಕಾರ್ಯಕ್ರಮದ ಮೂಲಕ ಆಡಿಯೋ ಲಾಂಚ್ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.
ನಾಗಣ್ಣ ನಿರ್ದೇಶನ ಹಾಗೂ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದಲ್ಲಿ ಒಟ್ಟು 4 ಹಾಡುಗಳು ಇದೆ. ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿ ನಟ ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಸೋನು ಸೂದ್, ಶ್ರೀನಾಥ್, ರವಿಶಂಕರ್, ಹರಿಪ್ರಿಯಾ, ಡ್ಯಾನಿಶ್ ಅಖ್ತರ್, ಶಶಿಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.
Comments