ಇದೇ ವಾರ ತೆರೆಗೆ ಬರಲಿದೆ 'ಚಿಟ್ಟೆ': ಗೃಹಿಣಿಯಾಗಿ ನಟಿ ಹರ್ಷಿಕಾ ಪೂಣಚ್ಚ

ಸ್ಯಾಂಡಲ್ ವುಡ್ ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದು ಕಡಿಮೆ ಸಿನಿಮಾಗಳಾದರೂ ಕೂಡ ಸಾಕಷ್ಟು ಅಭಿಮಾನಿಗಳನ್ನು ಗೆದ್ದಿದ್ದಾರೆ. ಸ್ಯಾಂಡಲ್ ವುಡ್ ಬೆಡಗಿ ಹರ್ಷಿಕಾ ಪೂಣಚ್ಚ ಅಭಿನಯದ 'ಚಿಟ್ಟೆ' ಸಿನಿಮಾ ಈಗಾಗಲೇ ಬಾರಿ ಕುತೂಹಲವನ್ನು ಮೂಡಿಸಿದೆ.
'ಚಿಟ್ಟೆ' ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ ಅಪ್ಪಟ್ಟ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದೇ ಮೊದಲ ಬಾರಿಗೆ ಈ ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಎಂ.ಎಲ್ ಪ್ರಸನ್ನ ನಿರ್ದೇಶನದ ಚಿಟ್ಟೆ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ದತೆಯನ್ನು ನಡೆಸಿದೆ. ಎಸ್, ಇದೇ ವಾರ ಜೂ. 29 ರಂದು ಚಿಟ್ಟೆ ಸಿನಿಮಾವು ಬಿಡುಗಡೆಯಾಗುತ್ತಿದೆ, ಈ ಚಿತ್ರದಲ್ಲಿ ಐದು ಹಾಡುಗಳಿದ್ದು. ವಿಶ್ವಜಿತ್ ರಾವ್ ಈ ಸಿನಿಮಾದಲ್ಲಿ ತಮ್ಮ ಕ್ಯಾಮೆರ ಕೈ ಚಳಕವನ್ನು ತೋರಿಸಿದ್ದಾರೆ. ಶ್ರೀನಿವಾಸರಾವ್ ಬಂಡವಾಳವನ್ನು ಹೂಡಿದ್ದಾರೆ.
Comments