'ಸೀತಾರಾಮ ಕಲ್ಯಾಣ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಕುಮಾರಸ್ವಾಮಿ ದಂಪತಿ

28 Jun 2018 9:55 AM | Entertainment
587 Report

ಜ್ವಾಗರ್ ನಾಯಕ ನಟ ನಿಖಿಲ್ ಕುಮಾರ್ ಅಭಿನಯದ  'ಸೀತಾರಾಮ ಕಲ್ಯಾಣ' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದೀಗ  ಚಿತ್ರದ ಶೂಟಿಂಗ್ ಸೆಟ್ ಗೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಇಬ್ಬರು ಕೂಡ 'ಸೀತಾರಾಮ ಕಲ್ಯಾಣ' ಸಿನಿಮಾದ ಚಿತ್ರೀಕರಣದ ಸ್ಥಳಕ್ಕೆ ಹೋಗಿದ್ದಾರೆ. ಮಗನ ನಟನೆ ಕಂಡು ಅಪ್ಪ ಅಮ್ಮ ಫುಲ್ ಖುಷಿ ಆಗಿದ್ದಾರೆ. ಈ ವೇಳೆ ನಿಖಿಲ್ ಕುಮಾರ್, ಚಿತ್ರದ ನಾಯಕಿ ರಚಿತಾ ರಾಮ್, ನಿರ್ದೇಶಕ ಎ.ಹರ್ಷ ಸೇರಿದಂತೆ ಎಲ್ಲರೂ ಕುಮಾರಸ್ವಾಮಿ ದಂಪತಿ ಜೊತೆಗೆ ಫೋಟೋ ತೆಗೆದುಕೊಂಡಿದ್ದಾರೆ. ಸಿಎಂ ಆಗಿರುವಂತಹ ಕುಮಾರಸ್ವಾಮಿ ಎಷ್ಟೇ ಕೆಲಸ ಇದ್ದರೂ ಕೂಡ ತಮ್ಮ ಮಗನ ಸಿನಿಮಾ ಬಗ್ಗೆಯೂ ಕೂಡ ಕಾಳಜಿವನ್ನು ವಹಿಸಿದ್ದಾರೆ. ಸೀತಾರಾಮ ಕಲ್ಯಾಣವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

Edited By

Manjula M

Reported By

Manjula M

Comments