Report Abuse
Are you sure you want to report this news ? Please tell us why ?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆ..!!

27 Jun 2018 9:50 AM | Entertainment
391
Report
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ವರನಟ ಡಾ. ರಾಜ್ ಕುಟುಂಬದ ಚಿನ್ನೇಗೌಡ ಜಯಗಳಿಸಿದ್ದಾರೆ. ನೂತನ ಅಧ್ಯಕ್ಷರಾಗಲಿರುವ ಎಸ್.ಎ.ಚಿನ್ನೇಗೌಡ ಅವರಿಗೆ 552 ಮತಗಳು ಲಭಿಸಿದೆ.
ಪ್ರತಿ ವರ್ಷವೂ ನಡೆಯಬೇಕಾಗಿದ್ದ ಚುನಾವಣೆ ಕಾರಣಾಂತಗಳಿಂದಾಗಿ ಕಳೆದ ಎರಡೂವರೆ ವರ್ಷಗಳಿಂದಲೂ ನಡೆದಿರಲಿಲ್ಲ. ಇನ್ನು ಈ ಬಾರಿ ವಿದ್ಯುನ್ಮಾನ ಮತಯಂತ್ರ ಬಳಸಿ ಮತದಾನ ನಡೆಸಿರುವುದು ವಿಶೇಷವಾಗಿದೆ. ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಸೋದರರಾದ ಚಿನ್ನೇಗೌಡರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ರಾಜ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Edited By
Shruthi G

Comments