ಅಕ್ಷಯ್ ಕುಮಾರ್ ಅಭಿನಯದ 'ಗೋಲ್ಡ್' ಚಿತ್ರದ ಟ್ರೈಲರ್ ರಿಲೀಸ್
ಆಯಕ್ಷನ್ ಹೀರೋ ಅಕ್ಷಯ್ ಕುಮಾರ್ ನಟಿಸಿರುವ ನಿರ್ದೇಶಕಿ ರೀಮಾ ಕಗ್ತಿ ನಿರ್ದೇಶಿಸಿರುವ 'ಗೋಲ್ಡ್'. ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. 'ಗೋಲ್ಡ್' ಚಿತ್ರವು 1948ರ ಲಂಡನ್ ಒಲಿಂಪಿಕ್ಸ್ ಆಧಾರಿತ ಪೀರಿಯಡ್ ಸ್ಪೋರ್ಟ್ಸ್ ಡ್ರಾಮಾ. ಸ್ವತಂತ್ರ್ಯ ಭಾರತ ಹೇಗೆ ಹಾಕಿಯಲ್ಲಿ ಮೊದಲ ಗೋಲ್ಡ್ ಮೆಡಲ್ ಗೆದ್ದುಕೊಂಡಿತು ಎಂಬುದು ಸಿನಿಮಾದ ಹೈಲೈಟ್.
ಈ ಚಿತ್ರ ಸ್ವಾತಂತ್ರ್ಯ ದಿನಾಚರಣೆ ದಿನ ಆಗಸ್ಟ್ 15ರಂದು ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಈ ಚಿತ್ರದ ಮೂಲಕ ಖ್ಯಾತ ಟೆಲಿವಿಷನ್ ತಾರೆ ಮತ್ತು ಮಾಡೆಲ್ ಆಗಿರುವ ಮೌನಿ ರಾಯ್ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಗೋಲ್ಡ್' ಚಿತ್ರದಲ್ಲಿ ಅಮಿತ್ ಶಾಧ್ ಮತ್ತು ಕುನಾಲ್ ಕಪೂರ್ ಸಹ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ರೀಮಾ ಕಾಗ್ಟಿ ನಿರ್ದೇಶನ ಮಾಡುತ್ತಿದ್ದು, ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ರವರು ನಿರ್ಮಾಣ ಮಾಡುತ್ತಿದ್ದಾರೆ.
Comments