'ಪ್ರೇಮಂ' ನಟಿಯರ ಹಿಂದೆ ಸ್ಯಾಂಡಲ್ ವುಡ್
ಮಲೆಯಾಳಂ ನ 'ಪ್ರೇಮಂ' 2016 ರಲ್ಲಿ ಬಿಡುಗಡೆಯಾದ ಸಿನಿಮಾ. ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆದರೂ ಯಾವುದೇ ಭಾಷೆಯ ಭೇದವಿಲ್ಲದೆ ಪ್ರತಿಯೊಬ್ಬ ವೀಕ್ಷಕನು ಸಿನಿಮಾವನ್ನು ಮಿಸ್ ಮಾಡಿಕೊಳ್ಳದೇ ನೋಡಿದರು. ಸಿನಿಮಾ ನೋಡಲು ಸಾಕಷ್ಟು ಕಾರಣಗಳಿದ್ದವು. ಕಲಾವಿದರು ಹಾಗೂ ಚಿತ್ರದ ಹಾಡುಗಳು, ಸಿನಿಮಾ ಬಿಡುಗಡೆ ಮುನ್ನವೇ ಚಿತ್ರದ ಬಗ್ಗೆ ಭರವಸೆ ಮೂಡಿಸಿದವು. ಚಿತ್ರದ ಬಿಡುಗಡೆ ಆದ ಮೇಲೆ ಪ್ರತಿ ಕಲಾವಿದರು ಮಲೆಯಾಳಂ, ತಮಿಳು, ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು.
ಸದ್ಯ ಪ್ರೇಮಂ ನಟಿಯರು ಸ್ಯಾಂಡಲ್ ವುಡ್ಗೆ ಆಗಮಿಸಿದ್ದು ಅಂದದ ಚೆಲುವೆಯರಿಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಹಾಗಾದರೆ 'ಪ್ರೇಮಂ' ನಲ್ಲಿ ನಟಿಸಿದ ಯಾವ ನಾಯಕಿಯರು ಇದೀಗ ಕನ್ನಡದ ಯಾವ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ? ಇಲ್ಲಿದೆ ಪರಿಪೂರ್ಣ ಮಾಹಿತಿ ಮುಂದೆ ಓದಿ..
ಅತ್ಯಂತ ಜನಪ್ರಿಯತೆ ಪಡೆದ ಪ್ರೇಮಂ ಚಿತ್ರದ ನಾಯಕಿ ಮಡೋನ ಸೆಬಾಸ್ಟಿಯನ್ ಈಗ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾಗೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಶುರುವಾಗಿದ್ದು ಸುದೀಪ್ ಹಾಗೂ ಮಡೋನ ಸೆಬಾಸ್ಟಿಯನ್ ಕಾಂಬಿನೇಶನ್ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತಿದೆ.
ಪ್ರೇಮಂ ಸಿನಿಮಾದಲ್ಲಿ ಮೂವರು ನಾಯಕಿಯರು ಕಾಣಿಸಿಕೊಂಡಿದ್ದು ಸದ್ಯ ನಟಿ ಅನುಪಮಾ ಪುನೀತ್ ರಾಜಕುಮಾರ್ ಅವರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕನ ಸ್ಕೂಲ್ ಡೇಸ್ ಲವ್ ಸ್ಟೋರಿಯ ಕಥೆ ಈ ಚಿತ್ರದಲ್ಲಿ ಇದ್ದು ಅನುಪಮಾ ಪರಮೇಶ್ವರನ್ ನಾಯಕಿಯಾಗಿ ಆಕ್ಟ್ ಮಾಡುತ್ತಿರುವ ನಟಸಾರ್ವಭೌಮ ಚಿತ್ರ ಹೇಗೆ ಮೂಡಿ ಬರುತ್ತದೆ ಎಂದು ಕಾಡು ನೋಡಬೇಕಿದೆ.
ಇನ್ನು ನಟಿ ಸಾಯಿಪಲ್ಲವಿಯ ಹಿಂದೆ ಇಡೀ ಸ್ಯಾಂಡಲ್ ವುಡ್...! 'ಪ್ರೇಮಂ' ಸಿನಿಮಾದಲ್ಲಿ ಪ್ರೇಕ್ಷಕರ ನಿದ್ದೆ ಕೆಡಿಸಿದ ನಟಿ ಸಾಯಿಪಲ್ಲವಿ. ಇಂದಿಗೂ ಕೂಡ ಅದೆಷ್ಟೋ ಅಭಿಮಾನಿಗಳು ಅವಳದ್ದೆ ನೆನಪಿನಲ್ಲಿದ್ದಾರೆ. ಈಗಾಗಲೇ ಇಬ್ಬರು ನಾಯಕಿಯರನ್ನ ಕರೆತಂದಿರುವ ಚಂದನವನ ನಿರ್ದೇಶಕ ನಿರ್ಮಾಪಕರು ಸಾಯಿ ಪಲ್ಲವಿಯನ್ನು ಕರೆತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ.
Comments