ಅಂಡರ್ ವರ್ಲ್ಡ್ ಸಿನಿಮಾಗಳ ಮೂಲಕ ಹವಾ ಕ್ರಿಯೇಟ್ ಮಾಡಿದ್ದ ನಟ ಆದಿತ್ಯ ಮತ್ತೊಂದು ಟ್ರೆಂಡ್ ಸೆಟ್ ಮಾಡಲು ರೆಡೀ..!!

ನಟ ಆದಿತ್ಯ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅಂಡರ್ ವರ್ಲ್ಡ್ ಸಿನಿಮಾಗಳು. 'ಡೆಡ್ಲಿ ಸೋಮ', 'ಡೆಡ್ಲಿ 2', 'ಎದೆಗಾರಿಕೆ' 'ಬೆಂಗಳೂರು ಅಂಡರ್ ವರ್ಲ್ಡ್' ಹೀಗೆ ಭೂಗತ ಲೋಕದ ಚಿತ್ರಗಳಿಗೆ ಬ್ರಾಂಡ್ ಆಗಿದ್ದ ಆದಿತ್ಯ ಸ್ಯಾಂಡಲ್ ವುಡ್ ನಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ.. ಅದೇ ಇದೀಗ ಇದರಿಂದ ಹೊರ ಬರಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ...ಇಷ್ಟಕ್ಕೂ ಆ ಪ್ಲಾನ್ ಏನು ಅಂತೀರಾ? ಹಾಗಾದ್ರೆ ಮುಂದೆ ಓದಿ…
ಆದಿತ್ಯ ಈಗ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ರವಿ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದಾರೆ. ಇತ್ತ ರವಿ ಶ್ರೀವತ್ಸ ಕೂಡ ಮಚ್ಚು ಲಾಂಗು ಸಿನಿಮಾಗಳಿಗೆ ಹೆಸರುವಾಸಿ. ಆದಿತ್ಯ ಮತ್ತು ರವಿ ಶ್ರೀವತ್ಸ 'ಡೆಡ್ಲಿ ಸೋಮ', 'ಡೆಡ್ಲಿ 2' ನಂತರ ಮತ್ತೆ ಒಂದಾಗಿ ಹೊಸ ಸಿನಿಮಾ ಶುರು ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಚಿತ್ರ ನಾಯಕ ಆದಿತ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರವಿ ಶ್ರೀ ವತ್ಸ ಅವರ ಜೊತೆಗೆ ಮೂರನೇ ಸಿನಿಮಾ ಮಾಡುತ್ತಿದ್ದು, ಅದಕ್ಕೆ ಟೈಟಲ್ ಸೂಚಿಸಿ ಎಂದು ಅಭಿಮಾನಿಗಳಲ್ಲಿ ಕೇಳಿ ಕೊಂಡಿದ್ದಾರೆ. ಅವರೇ ಹೇಳಿರುವಂತೆ ಇದು ಒಂದು ಪಕ್ಕಾ ಕಮರ್ಶಿಯಲ್ ಸಿನಿಮಾ ಆಗಿದೆಯಂತೆ. ಈ ಮೂಲಕ ಆದಿತ್ಯ ಜೊತೆಗೆ ರವಿ ಶ್ರೀವತ್ಸ ಕೂಡ ಭೂಗತ ಜಗತ್ತಿನ ಸಿನಿಮಾಗಳಿಂದ ದೂರ ಬಂದಿದ್ದಾರೆ.
Comments