ಜುಲೈ 25 ರಂದು ಸೆಟ್ಟೇರಲಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿಯ 'ಭರಾಟೆ' ಚಿತ್ರ
ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರು ಮುಫ್ತಿ ಸಿನಿಮಾದ ನಂತರ ಭರ್ಜರಿ ಚೇತನ್ ನಿರ್ದೇಶನದ 'ಭರಾಟೆ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ.
ಮುಂದಿನ ದಿನಗಳಲ್ಲಿ ಮಹೂರ್ತ ಫಿಕ್ಸ್ ಮಾಡಿ ಚಿತ್ರೀಕರಣ ಶುರು ಮಾಡಲು ತಯಾರಿ ನಡೆಸುತ್ತಿರುವ ಚೇತನ ಇಂದು ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದ್ದಾರೆ. ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 5 ಗಂಟೆಗೆ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದೆ ಚಿತ್ರತಂಡ. ನಾಯಕಿಯಾಗಿ ಕಿಸ್ ಖ್ಯಾತಿಯ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಚಿತ್ರದ ಶೂಟಿಂಗ್ ಜುಲೈ 25 ರಿಂದ ಪ್ರಾರಂಭವಾಗಲಿದೆ.
Comments