ಅಪ್ಪು ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರಕ್ಕೆ 2ನೇ ನಾಯಕಿಯಾಗಲಿರುವ ಈ ಬೆಡಗಿ..!!



ಪುನೀತ್ ರಾಜಕುಮಾರ್ ಅವರ ಬಹುನಿರೀಕ್ಷಿತ ಚಿತ್ರವಾದ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ಬಹುತೇಕ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣ ಬಳ್ಳಾರಿಯಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ಪುನೀತ್ ಫೋಟೋ ಜರ್ನಲಿಸ್ಟ್ ಪಾತ್ರ ನಿರ್ವಹಿಸುತ್ತಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್ ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಶೂಟಿಂಗ್ ಆರಂಭದಲ್ಲಿ ಇಬ್ಬರು ನಾಯಕಿಯರು ಎಂದು ಚಿತ್ರತಂಡ ಘೋಷಿಸಿತ್ತು. ನಟಿ ಪ್ರಿಯಾಂಕಾ ಅವರು ಸೆಲೆಕ್ಟ್ ಸಹ ಆಗಿದ್ದರು. ತದನಂತರ ಪ್ರಿಯಾಂಕಾ ಅವರು ಚಿತ್ರದಿಂದ ಹೊರ ಬಂದ ನಂತರ ರಚಿತಾ ರಾಮ್ ಆಯ್ಕೆಯಾಗಿದ್ದರು. ಇದೀಗ ಅವರ ಭಾಗದ ಚಿತ್ರೀಕರಣ ಮುಗಿದಿದ್ದು, ಮತ್ತೊಬ್ಬ ನಾಯಕಿ ಪಾತ್ರಕ್ಕಾಗಿ ಚಿತ್ರತಂಡ ಅನುಪಮಾ ಪರಮೇಶ್ವರನ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಪ್ರೇಮಂ ರಿಮೇಕ್ ನಲ್ಲಿ ನಟಿಸುತ್ತಿರುವ ಅನುಪಮಾ ಧರ್ಮಯೋಗಿ, ಸಾತಮಾನಂ ಭವಟಿ, ಜೊಮೊಂತೆ ಸುವಿಶೇಷಂಗಳ್, ವನ್ನದಿ ಒಕಟೆ ಜಿಂದಗಿ ಮತ್ತು ಇತ್ತೀಚಿನ ಕೃಷ್ಣಾರ್ಜುನ ಯುಧಮ್ ಚಿತ್ರದಲ್ಲಿ ನಾನಿ ಜೊತೆ ನಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ಜೊತೆ ಕೋಡಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
Comments