ಮತ್ತೊಮ್ಮೆ ಅಥಿತಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕುರುಕ್ಷೇತ್ರ' ಹಾಗೂ 'ಯಜಮಾನ' ಸಿನಿಮಾದ ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದಾರೆ. ಈ ಸಿನಿಮಾದ ಜೊತೆಗೆ ದರ್ಶನ್ ಈಗ ಬೇರೊಂದು ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅದು ನಟ ಪ್ರಜ್ವಲ್ ದೇವರಾಜ್ ಅವರ ಚಿತ್ರಕ್ಕೆ ಎನ್ನುವುದೇ ಮತ್ತೊಂದು ವಿಶೇಷ.
ಹಿಂದೆ ನಟ ದರ್ಶನ್ 'ಚೌಕ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದ ನಾಲ್ಕು ನಾಯಕರ ಪೈಕಿ ಪ್ರಜ್ವಲ್ ದೇವರಾಜ್ ಕೂಡ ಒಬ್ಬರಾಗಿದ್ದರು ಅನ್ನೋದು ಗೊತ್ತಿರುವ ವಿಷಯವೇ. ಆದರೆ ಈಗ ಮತ್ತೆ ಪ್ರಜ್ವಲ್ ದೇವರಾಜ್ ನಟನೆಯ 'ಇನ್ ಸ್ಪೆಕ್ಟರ್ ವಿಕ್ರಮ್' ಚಿತ್ರದಲ್ಲಿಯೂ ದರ್ಶನ್ ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ದರ್ಶನ್ ಈ ಸಿನಿಮಾದ ಒಂದು ವಾರದ ಚಿತ್ರಿಕರಣದಲ್ಲಿ ನಲ್ಲಿ ಭಾಗಿಯಾಗಲಿದ್ದಾರಂತೆ. ಆದರೆ ಅವರ ಪಾತ್ರದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ. 'ಪುಷ್ಪಕ ವಿಮಾನ' ಚಿತ್ರವನ್ನು ನಿರ್ಮಾಣ ಮಾಡಿದ್ದಂತಹ ವಿಖ್ಯಾತ್ ಈ ಚಿತ್ರಕ್ಕೆ ಹಣವನ್ನು ಹಾಕಿದ್ದಾರೆ. ನರಸಿಂಹರವರು ಸಿನಿಮಾಗೆ ನಿರ್ದೇಶನ ಮಾಡಿದ್ದು, ಇದು ಅವರ ಚೊಚ್ಚಲ ಸಿನಿಮಾವಾಗಿದೆ. ಸಿನಿಮಾದಲ್ಲಿ ಭಾವನ ನಾಯಕಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.
Comments