ನಾಗರಹಾವು ರಾಮಾಚಾರಿಯ ಹೊಸ ಅವತಾರ..!

ಕನ್ನಡ ಚಿತ್ರರಂಗದಲ್ಲಿ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾದ 'ನಾಗರಹಾವು' ಚಿತ್ರ ಹೊಸ ರೂಪ ಪಡೆದುಕೊಂಡು ಮತ್ತೆ ತೆರೆಗೆ ಬರಲು ಸಜ್ಜಾಗಿದೆ. 1973ರಲ್ಲಿ ರಿಲೀಸ್ ಆಗಿದ್ದಂತಹ ನಾಗರಹಾವು ಸಿನಿಮಾ ಡಿಜಿಟಲ್ ವರ್ಷನ್ ನಲ್ಲಿ ರೀ-ರಿಲೀಸ್ ಆಗುತ್ತಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. 30 ಎಂಎಂ ನಲ್ಲಿದ್ದ ಚಿತ್ರ ಇದೀಗ ಸಿನಿಮಾ ಸ್ಕೋಪ್ ಮತ್ತು 7.1 ಡಿಟಿಎಸ್ ಸೌಂಡ್ ಎಫೆಕ್ಟ್ನಲ್ಲಿ ತಯಾರಾಗಿದ್ದು ಇತ್ತಿಚಿಗಷ್ಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಹಳೆಯ 'ನಾಗರಹಾವು' ಸಿನಿಮಾವನ್ನು ನಿರ್ಮಾಪಕ ವೀರಸ್ವಾಮಿ ನಿರ್ಮಾಣ ಮಾಡಿದ್ದರು. ಈಗ ಅವರ ಎರಡನೇ ಮಗನಾದ ರವಿಚಂದ್ರನ್ ಸಹೋದರ ಬಾಲಾಜಿಯವರು ಈ ಚಿತ್ರವನ್ನು ಮತ್ತೆ ರೀ ರಿಲೀಸ್ ಮಾಡಲು ಮುಂದಾಗಿದ್ದಾರೆ. ಕಿಚ್ಚ ಸುದೀಪ್ ಅವರಿಂದ ನಾಗರಹಾವು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿಸಿದ್ದಾರೆ. ರಾಮಾಚಾರಿಯ ಹೊಸ ಅವತಾರವನ್ನು ತೆರೆ ಮೇಲೆ ನೋಡಲು ಕನ್ನಡ ಸಿನಿಮಾ ಕಲಾವಿದರು ತುಂಬಾ ಕಾತುರರಾಗಿದ್ದಾರೆ. 'ನಾಗರಹಾವು' ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದ್ದು, ಕನ್ನಡದ ಬಹುತೇಕ ಕಲಾವಿದರು, ತಂತ್ರಜ್ಙರು ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಹಾಡಿ ಹೊಗಳಿದ್ದಾರೆ.
Comments