ಶಿವಣ್ಣ- ಕಿಚ್ಚ ನ ಅಭಿಮಾನಿಗಳಿಗೆ ಗುಡ್ ನ್ಯೂಸ್..! ಕೊನೆಗೂ ಮೂಹೂರ್ತ ಫಿಕ್ಸ್ ಆಯ್ತು 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆಗೆ ..!
'ದಿ ವಿಲನ್' ಚಂದನವನದ ಸ್ಟಾರ್ ಡೈರೆಕ್ಟರ್ ಪ್ರೇಮ್, ಹ್ಯಾಟ್ರಿಕ್ ಹೀರೊ, ಕರುನಾಡ ಚಕ್ರವರ್ತಿ ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಬರ್ತಿರೋ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಸಿನಿಮಾದ ಮೇಕಿಂಗ್ ಸ್ಟಿಲ್ಸ್ ಈಗಾಗ್ಲೇ ಸಾಕಷ್ಟು ಕುತೂಹಲವನ್ನ ಕೆರಳಿಸಿದೆ. ಇಬ್ಬರಲ್ಲಿ ಯಾರು ವಿಲನ್.? ಟೀಸರ್ ಯಾವಾಗ ಅನ್ನೋ ಪ್ರಶ್ನೆ ಎಲ್ಲಾ ಸಿನಿಪ್ರೇಮಿಗಳ ಲ್ಲೂ ಕಾಡ್ತಿದೆ. ಈಗ ನಿರ್ದೇಶಕ ಪ್ರೇಮ್ ಅದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ.
ಇದೆ ತಿಂಗಳು ಜೂನ್ 28 ರಂದು 'ದಿ ವಿಲನ್' ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಇಷ್ಟು ದಿನ ಅಭಿಮಾನಿಗಳನ್ನ ಕಾಯಿಸಿದ್ದ ಪ್ರೇಮ್ ಡಬಲ್ ಧಮಾಕ ಕೊಡ್ತಿದ್ದಾರೆ. ಸಿನಿಮಾದಲ್ಲಿ ಶಿವಣ್ಣ ಮತ್ತು ಸುದೀಪ್ ರವರ ಕ್ಯಾರೆಕ್ಟರ್ ಹೈಲೈಟ್ ಮಾಡುವಂತಾ ಪ್ರತ್ಯೇಕ ಟೀಸರ್ಗಳನ್ನ ಬಿಡುಗಡೆ ಮಾಡಲಿದ್ದಾರೆ. ಇದೇ ಜೂನ್ 28ರಂದು ಬೆಂಗಳೂರಿನ ಜಿ.ಟಿ.ಮಾಲ್ ನಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅದ್ರೆ ಅಭಿಮಾನಿಗಳು ಸುಮ್ಮನೆ ಟೀಸರ್ ನೋಡೋಕೆ ಆಗೋದಿಲ್ಲ. ಟೀಸರ್ ವೀಕ್ಷಣೆಗೆ ಸಿನಿ ಪ್ರೇಮಿಗಳು 500 ರೂಪಾಯಿ ಕೊಡಬೇಕು. 'ದಿ ವಿಲನ್' ಸಿನಿಮಾದ ಟೀಸರ್ ಕನ್ನಡ ಸಿನಿಮಾ ರಂಗದಲ್ಲಿ ಮೊಟ್ಟ ಮೊದಲ ಪೇಯ್ಡ್ ಟೀಸರ್ ಅನ್ನೋ ದಾಖಲೆಗೂ ಕಾರಣವಾಗಲಿದೆ. ಟೀಸರ್’ನಿಂದ ಸಂಗ್ರಹವಾಗುವ ಹಣವನ್ನು ಸಂಕಷ್ಟ ಎದುರಿಸುತ್ತಿರುವ ನಿರ್ದೇಶಕರ ಕುಟುಂಬಕ್ಕೆ ನೀಡೋದಕ್ಕೆ ಪ್ರೇಮ್ ನಿರ್ಧರಿಸಿದ್ದಾರೆ. ಸದ್ಯಕ್ಕೆ ಎರಡು ಟೀಸರ್ ಗಳ ಮೂಲಕ ಅಭಿಮಾನಿಗಳ ಮುಂದೆ ಬರ್ತಿರೋ ಪ್ರೇಮ್ , ವರಮಹಾಲಕ್ಷ್ಮಿ ಹಬ್ಬಕ್ಕೆ ವಿಲನ್ ನ ವಿಶ್ವರೂಪ ತೋರಿಸಲಿದ್ದಾರಂತೆ.
Comments