ಒಂದೇ ದಿನದಲ್ಲಿ ಲಕ್ಷ ವೀವ್ಸ್ ಪಡೆದ 'ಮೋಡ ಮುಸುಕಿದ ಬಾನು..ಪ್ರವೀಣ ದಡ್ಡ ದಡ್ಡ' ಸಾಂಗ್

ಸ್ಯಾಂಡಲ್ ವುಡ್ ನಲ್ಲಿ 'ರಿಕ್ಕಿ' ಹಾಗೂ 'ಕಿರಿಕ್ ಪಾರ್ಟಿ' ಯಂತಹ ಹಿಟ್ ಸಿನಿಮಾ ನೀಡಿದ್ದ ರಿಷಬ್ ಶೆಟ್ಟಿ 'ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ" ಎಂಬ ಸಿನಿಮಾ ಮಾಡುತ್ತಿದ್ದು. ಚಿತ್ರದ ಹಾಡೊಂದು ಬಾರಿ ಸದ್ದು ಮಾಡ್ತಿದೆ.
ಹೌದು.. 'ಮೋಡ ಮುಸುಕಿದ ಬಾನು..ಪ್ರವೀಣ ದಡ್ಡ ದಡ್ಡ' ಎಂಬ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹವಾ ಕ್ರಿಯೇಟ್ ಮಾಡಿದೆ. ಈ ಚಿತ್ರದ ಹಾಡು ನಿನ್ನೆ ರಿಲೀಸ್ ಆಗಿದ್ದು, ಬರೋಬ್ಬರಿ 1 ಲಕ್ಷ ವೀವ್ಸ್ ಕಂಡಿದೆ, ಇದು ರಿಷಬ್ ಶೆಟ್ಟಿಯವರ ಮೂರನೇ ಸಿನಿಮವಾಗಿದ್ದು, ಚಿತ್ರವನ್ನು ಅವರೇ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೂಲಕ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರೋದನ್ನು ಸಂಪೂರ್ಣ ಹಾಸ್ಯಮಯವಾಗಿ ಹೇಳುವುದಕ್ಕೆ ಹೊರಟಿದ್ದಾರಂತೆ ರಿಷಬ್. ಕಾಸರಗೋಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೂಟಿಂಗ್ ನಡೆದಿದ್ದು, ಅನಂತ್ ನಾಗ್ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೆಂಕಟೇಶ್ ಅಂಗುರಾಜ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
Comments