ಸನ್ನಿ ಲಿಯೋನ್ ಆಸ್ಪತ್ರೆಗೆ ದಾಖಲು: ಕಾರಣ ಏನ್ ಗೊತ್ತಾ?
ಬಾಲಿವುಡ್ ನಟಿ ಸನ್ನಿ ಲಿಯೋನ್ ಅಂದರೆ ಪಡ್ಡೆ ಹುಡುಗರು ಹುಬ್ಬೇರಿಸುವುದಂತೂ ಸುಳ್ಳಲ್ಲ. ಅಷ್ಟರ ಮಟ್ಟಿಗೆ ಹಾಟ್ ಪೇವರೆಟ್ ಈ ಸನ್ನಿ ಲಿಯೋನ್. ಇದೀಗ ಸನ್ನಿ ಲಿಯೋನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸನ್ನಿ ಲಿಯೋನ್ ಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ, ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪ್ಲಿಟ್ ವಿಲ್ಲಾ ಸೀಸನ್ 11 ಶೂಟಿಂಗ್ ವೇಳೆ ನಟಿ ಸನ್ನಿ ಲಿಯೋನ್ ಅವರಿಗೆ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಉತ್ತರಾಖಂಡದ ಕಾಶಿಪುರದಲ್ಲಿರುವ ಬ್ರಿಜೆಶ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು 'ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಅದಕ್ಕೆ ಉತ್ತಮವಾದ ಚಿಕಿತ್ಸೆ ನೀಡಲಾಗಿದೆ, ಆರೋಗ್ಯವಾಗಿದ್ದಾರೆ. ನಾರ್ಮಲ್ ಕಂಡಿಷನ್ ಗೆ ಬಂದ ಕೂಡಲೇ ಡಿಸ್ಜಾರ್ಜ್ ಮಾಡಲಾಗುತ್ತೆ' ಎಂದು ಹೇಳಿದ್ದಾರೆ.
Comments