'ದಿ ವಿಲನ್' ಚಿತ್ರದ ಸಾಂಗ್ ಲಿರಿಕ್ಸ್ ವಿವಾದಕ್ಕೆ ತೆರೆ ಎಳೆದ ನಿರ್ದೇಶಕ ಪ್ರೇಮ್

ಸ್ಯಾಂಡಲ್ ವುಡ್ ನಲ್ಲಿ ಒಂದಲ್ಲ ಒಂದು ಕಾರಣಗೆ ವಿವಾದಗಳು ಹುಟ್ಟಿಕೊಳ್ಳುತ್ತಿರುತ್ತವೆ. ಇದೀಗ 'ದಿ ವಿಲನ್' ಚಿತ್ರದ ಸಾಂಗ್ 'ನಿನ್ನೆ ಮೊನ್ನೆ ಬಂದರೋಲ್ಲ ನಂ.1 ಅಂತರಲ್ಲೋ' ಸಾಂಗ್ ಲಿರಿಕ್ಸ್ ಕುರಿತು ಉಂಟಾಗಿರುವಂತಹ ವಿವಾದಗಳಿಗೆ ಇದೀಗ ನಿರ್ದೇಶಕ ಪ್ರೇಮ್ ಅವರು ಸ್ಪಷ್ಟನೆ ನೀಡುವುದರ ಮುಖಾಂತರ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ.
ನಿರ್ದೇಶಕ ಪ್ರೇಮ್ ಅವರು ಫೇಸ್ ಬುಕ್ ಲೈವ್ ಗೆ ಬಂದು ಸಿನಿಮಾದ ಲಿರಿಕ್ಸ್ ಬಗ್ಗೆ ಮಾತನಾಡಿದ್ದಾರೆ,' ನಾನು ನನ್ನ ಸಿನಿಮಾದ ಕಥೆಗೆ ತಕ್ಕಹಾಗೆ ಲಿರಿಕ್ಸ್ ಅನ್ನ ಬರೀತಿನಿ . ಈ ಹಾಡಿನ ಸಾಲು ತನ್ನ ಸಿನಿಮಾಗೆ ತಕ್ಕಹಾಗೆ ಇದ್ದು ಇದನ್ನ ಯಾರ ಕಾಲು ಎಳಿಬೇಕು ಅಂತ ಬರೆದಿಲ್ಲ . ಯಾರಿಗೂ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ . ಇದು ಬರೀ ಸಿನಿಮಾದಲ್ಲಿ ಕಥೆಗೆ ಪೂರಕವಾದ ಹಾಡಷ್ಟೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
Comments