ಕಂಪ್ಲೀಟ್ ಆಯ್ತು 'ತಾಯಿಗೆ ತಕ್ಕ ಮಗ' ಚಿತ್ರದ ಶೂಟಿಂಗ್
ಸ್ಯಾಂಡಲ್ ವುಡ್ ನಲ್ಲಿ ಕೃಷ್ಣ ಎಂದಾಕ್ಷಣ ನೆನಪಾಗೋದು ಅಜೇಯ್ ರಾವ್ ನಟ ಅಜೇಯ್ ರಾವ್ ಹೊಸ ಚಿತ್ರ 'ತಾಯಿಗೆ ತಕ್ಕ ಮಗ' ಚಿತ್ರದ ಚಿತ್ರಿಕರಣ ಕಂಪ್ಲೀಟ್ ಆಗಿದೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಶಶಾಂಕ್ ನಿರ್ಮಾಣದ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಅಜಯ್ ರಾವ್ ಗೆ ಜೋಡಿಯಾಗಿ ನಟಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ನಾಯಕನ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಷ್ ಅಭಿನಯಿಸಿದ್ದು, ಈ ಹಿಂದೆ 'ಎಕ್ಸ್ ಕ್ಯೂಸ್ ಮಿ' ಚಿತ್ರದಲ್ಲಿ ಅಜೇಯ್ ತಾಯಿಯಾಗಿ ಸುಮಲತಾ ಅಭಿನಯಿಸಿದ್ದು, ಬೇರೆ ಯಾವ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ, ಇದೀಗ 'ತಾಯಿಗೆ ತಕ್ಕ ಮಗ' ಸಿನಿಮಾದಲ್ಲಿ ಅಜೇಯ್ ರಾವ್ ಹಾಗೂ ಸುಮಲತಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
Comments