ಸ್ಯಾಂಡಲ್ ವುಡ್ ನಲ್ಲಿ ಎದ್ದಿರುವ `ಬಾಸ್' ವಿವಾದ : ಹ್ಯಾಟ್ರಿಕ್ ಹೀರೋ ಹೇಳಿದ್ದೇನು?
ಸ್ಯಾಂಡಲ್ ವುಡ್ ಒಂದಲ್ಲ ಒಂದು ವಿವಾದಗಳು ತಲೆ ಎತ್ತುತ್ತಿರುತ್ತವೆ. ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿರುವ ಮತ್ತೊಂದು ವಿವಾದ ಎಂದರೆ ಅದು ಬಾಸ್ ಯಾರು? ಎನ್ನುವುದು. ಈ ಕಾಂಟ್ರವರ್ಸಿಗೆ ನಟ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅವರವರ ಮನೇಲಿ ಅವರುಗಳೇ ಬಾಸ್, ಮೇಲಿರೋನೇ ಬಿಗ್ ಬಾಸ್ ಎಂದು ಶಿವಣ್ಣ ಅವರು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ದಿ ವಿಲಿನ್ ಚಿತ್ರದಲ್ಲಿರುವ ನೆನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ ಒನ್ ಸಾಂಗ್ ವಿವಾದ ಆಗಿರೋದು ನನಗೆ ತಿಳಿದಿಲ್ಲ. ನಾವೆಲ್ಲರೂ ಒಂದೇ, ಎಲ್ಲಾ ನಟರೂ ಬಾಸ್, ದರ್ಶನ್ ಗೆ ಬಾಸ್ ಅಂದ್ರೂ ಖುಷಿನೇ, ಯಶ್ ಗೆ ಬಾಸ್ ಅಂದ್ರೂ ಖುಷಿನೇ ಅದನ್ನೆಲ್ಲಾ ನಾವ್ಯಾರು ತಲೆ ಕೆಡಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಬಾಸ್ ಎನ್ನುವ ಕಾನ್ಸೆಪ್ಟ್ ನನ್ನಲ್ಲಿ ಇಲ್ಲ. ಪ್ರೇಮ್ ಟ್ವೀಟ್ ಮಾಡಿರೋ ವಿಚಾರವೇ ನನಗೆ ಗೊತ್ತಿಲ್ಲ. ಯಾರಾದ್ರೂ ಬಾಸ್ ಆಗಲಿ, ಅದರ ಬಗ್ಗೆ ನನ್ನ ತಕರಾರು ಇಲ್ಲ ಎಂದಿದ್ದಾರೆ.
Comments