ಡಾಲಿಯ 'ಭೈರವ' ಲುಕ್ ಗೆ ಸುದೀಪ್ ಹೇಳಿದ್ದೇನು.?

'ಭೈರವ-ಗೀತಾ'… 'ಡಾಲಿ' ಧನಂಜಯ್ ಅಭಿನಯಿಸುತ್ತಿರುವ ಮೊದಲ ತೆಲುಗು ಸಿನಿಮಾ. ಯುವ ಪ್ರತಿಭೆ ಸಿದ್ಧಾರ್ಥ್ ಚೊಚ್ಚಲ ಬಾರಿಗೆ ನಿರ್ದೇಶನವನ್ನು ಮಾಡುತ್ತಿದ್ದು, ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡ್ತಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೊಸ್ಟರ್ ಬಿಡುಗಡೆಯಾಗಿದ್ದು, ದಕ್ಷಿಣ ಚಿತ್ರರಂಗದ ನಟರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸ್ಯಾಂಡಲ್ ವುಡ್ ಕಲಾವಿದರು ನಟ ಧನಂಜಯ್ ಅವರನ್ನ ಹಾಡಿ ಹೊಗಳಿದ್ದಾರೆ. ಧನಂಜಯ್ ಅವರ 'ಭೈರವ' ಗೆಟಪ್ ಗೆ ಕಿಚ್ಚ ಸುದೀಪ್ ಮನಸೋತಿದ್ದಾರಂತೆ. 'ಡಾಲಿ'ಯ ಹೊಸ ಖದರ್ ಗೆ ಅಭಿನಯ ಚಕ್ರವರ್ತಿಯೇ ಫಿದಾ ಆಗಿದ್ದು, ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ಅಷ್ಟೆ ಅಲ್ಲದೇ ಧನಂಜಯ್ ಅವರ ಭವಿಷ್ಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. 'ಭೈರವ ಗೀತಾ' ಚಿತ್ರದ ಫಸ್ಟ್ ಲುಕ್ ನೋಡಿ ಕಾಮೆಂಟ್ ಮಾಡಿರುವ ಅಭಿನಯ ಚಕ್ರವರ್ತಿ ಸುದೀಪ್ ''ನಿಮ್ಮ ಬಗ್ಗೆ ನನಗೆ ತುಂಬಾ ಖುಷಿ ಆಗ್ತಿದೆ. ನೀವು ಇದಕ್ಕೆ ಸಂಪೂರ್ಣವಾಗಿ ಅರ್ಹರಾಗಿದ್ದು, ಖಂಡಿತವಾಗಿಯೂ ನೀವು ಗುರಿ ಮುಟ್ಟುವಿರಿ. ಅದಕ್ಕಾಗಿ ನೀವು ದೊಡ್ಡ ಮಟ್ಟದ ಪ್ರಯತ್ನ ಮಾಡಿ ಮತ್ತು ನಿಮ್ಮ ನಂಬಿಕೆಯನ್ನ ಹೆಚ್ಚಿಸಿಕೊಳ್ಳಿ'' ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ. ಡಾಲಿ ಧನಂಜಯ್ ಗೆ ಶುಭಾಷಯ ತಿಳಿಸಿದ್ದಾರೆ.
Comments