ಕಣ್ಣು ಕುಕ್ಕುವಂತಿದೆ ನಟ ಅಕ್ಷಯ್ ಕುಮಾರ್ ಮನೆ..!

ಸುಂದರ ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು . ಸ್ವಂತ ಮನೆ ಯಾರಿಗೆ ತಾನೆ ಬೇಡ ಹೇಳಿ. ಮತ್ತೆ ಮತ್ತೆ ನೋಡಬೇಕೆನ್ನುವಂತಹ ಮನೆ ಕಟ್ಟಬೇಕೆನ್ನುವುದು ಅನೇಕರ ಬಯಕೆ ಕೂಡ ಆಗಿರುತ್ತದೆ. ಅದೇ ರೀತಿ ಬಾಲಿವುಡ್ ಸ್ಟಾರ್ ಗಳು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಬಂಗಲೆಯನ್ನು ನಾಚಿಸುವಂತಹ ಮನೆಯನ್ನು ಕಟ್ಟಿದ್ದಾರೆ.
ಅಕ್ಷಯ್ ಕುಮಾರ್ ಮನೆ ನೋಡಿದ್ರೆ ಮೂಗಿನ ಮೇಲೆ ನೀವೆ ಬೆರಳಿಡ್ತೀರಾ. ಒಬ್ಬ ಸ್ಟಾರ್ ಮನೆಯಲ್ಲಿ ಏನೆಲ್ಲಾ ಇರಬೇಕೋ ಎಲ್ಲ ಸೌಲಭ್ಯಗಳೂ ಅಕ್ಷಯ್ ಮನೆಯಲ್ಲಿದೆ. ಡುಪ್ಲೆಕ್ಸ್ ಮನೆಯ ಗ್ರೌಂಡ್ ಫ್ಲೋರ್ ನಲ್ಲಿ ಅಡುಗೆ ಮನೆ, ಡೈನಿಂಗ್ ರೂಂ ಹಾಗೂ ಹೋಂ ಥಿಯೇಟರ್ ಇದೆ. ಎರಡನೇ ಮಹಡಿಯಲ್ಲಿ ಬೆಡ್ ರೂಂ, ಬಾಲ್ಕನಿ ಹಾಗೂ ಪತ್ನಿ ಟ್ವಿಂಕಲ್ ಆಫೀಸ್ ಇದೆ. ಅಕ್ಷಯ್, ಪತ್ನಿ ಟ್ವಿಂಕಲ್ ಮಾತಿಗೆ ಹೆಚ್ಚು ಬೆಲೆ ಕೊಡ್ತಾರೆ. ಟ್ವಿಂಕಲ್ ಹಾಗೂ ಮಗಳು ನಿತಾಶಾ ಮತ್ತು ಮಗ ಆರವ್ ಇಷ್ಟದಂತೆ ಮನೆಯನ್ನು ಡಿಸೈನ್ ಮಾಡಲಾಗಿದೆ. ಅಕ್ಷಯ್ ಮನೆಯ ಇಂಟೀರಿಯರ್ ಎಲ್ಲರನ್ನೂ ಆಕರ್ಷಿಸುವಂತಿದೆ. ತಮ್ಮ ಮನೆಯನ್ನು ಟ್ವಿಂಕಲ್ ಡಿಸೈನ್ ಮಾಡಿದ್ದಾರೆ. ಟ್ವಿಂಕಲ್ ಇಂಟೀರಿಯರ್ ಡಿಸೈನರ್ ಕೂಡಾ ಆಗಿದ್ದಾರೆ.
Comments