'ವಿಕ್ಟರಿ 2' ಚಿತ್ರದಲ್ಲಿ ಶರಣ್ ಗೆ ಜೋಡಿಯಾದ ಅಪೂರ್ವ

'ರ‍್ಯಾಂಬೋ 2' ಚಿತ್ರದ ನಟ ಶರಣ್ ಯಶಸ್ಸಿನ ನಂತರ ರಾಗಿಣಿ ದ್ವಿವೇದಿ ಜೊತೆಗೆ ನಟಿಸುತ್ತಿರುವ ಚಿತ್ರದ ಶೂಟಿಂಗ್ ಗಾಗಿ ಅಮೇರಿಕಾಕ್ಕೆ ತೆರಳಿದಿದ್ದರು. ಆದರೆ, ಇದೀಗ ‘ರ‍್ಯಾಂಬೋ 2' ನಂತರ 'ವಿಕ್ಟರಿ 2' ಹೆಸರಿನಲ್ಲಿಯೂ ಸಿನಿಮಾ ತೆರೆ ಮೇಲೆ ಬರ್ತಿದೆ.
'ಅಲೆಮಾರಿ' ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ನಟ ಶರಣ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಅದೇ ಸಿನಿಮಾಗೆ ಈಗ 'ವಿಕ್ಟರಿ 2' ಎಂಬ ಟೈಟಲ್ ಕೂಡ ಫಿಕ್ಸ್ ಆಗಿದೆ. ವಿಶೇಷ ಅಂದರೆ, ಈ ಚಿತ್ರದಲ್ಲಿ ಶರಣ್ ಗೆ ನಾಯಕಿಯಾಗಿ ಅಪೂರ್ವರವರು ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಅವರ 'ಅಪೂರ್ವ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಅಪೂರ್ವ ಆ ಸಿನಿಮಾದ ನಂತರ ಬೇರೆ ಯಾವ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಆದರೆ, ಈಗ 'ವಿಕ್ಟರಿ 2' ಚಿತ್ರಕ್ಕೆ ಅವರೇ ನಾಯಕಿ ಆಗಿದ್ದು, ಈಗಾಗಲೇ ಸಿನಿಮಾದ ಟಾಕಿ ಪೋಷನ್ ಮುಕ್ತಾಯವಾಗಿದೆಯಂತೆ.
Comments