ಮಳೆ ಹುಡುಗಿ ಕೆನ್ನೆ ಮೇಲೆ ಮತ್ತೆ ಬಂದಿದ್ಯಂತೆ ಅದೃಷ್ಟದ ಮಚ್ಚೆ..!?
ಪೂಜಾ ಗಾಂಧಿ ಅಂದ ತಕ್ಷಣ ನೆನಪಾಗೋದೆ ಮುಂಗಾರು ಮಳೆ ಸಿನಿಮಾ…ಮಳೆ ಹುಡುಗಿ ಅಂದರೂ ನೆನಪಾಗೋದೆ ಪೂಜಾ ಗಾಂಧಿ. ಮುಂಗಾರು ಮಳೆ ಸಿನಿಮಾದಲ್ಲಿ ಪೂಜಾ ಗಾಂಧಿ ಮುಖದಲ್ಲಿರುವ ಮಚ್ಚೆಯನ್ನು ನೀವೆಲ್ಲಾ ಗಮನಿಸಿಯೇ ಇರುತ್ತೀರಾ..
ಆ ಮಚ್ಚೆಯನ್ನು ಕೆಲವರು ಅದೃಷ್ಟದ ಮಚ್ಚೆ ಎಂದು ಹೇಳುತ್ತಿದ್ದರು. ಆದರೆ ಅದ್ಯಾಕೋ ಗೊತ್ತಿಲ್ಲ ಪೂಜಾ ಗಾಂಧಿ ಮಚ್ಚೆಯನ್ನು ತೆಗೆಸಿಬಿಟ್ಟಿದ್ದರು. ಅವರ ಕೆನ್ನೆ ಮೇಲೆ ಇದ್ದ ಮಚ್ಚೆಯನ್ನು ನೋಡಿಯೇ ಪಡ್ಡೆ ಹುಡುಗರು ತಲೆ ಕೆಡಿಸಿಕೊಂಡಿದಂತೂ ಸುಳ್ಳಲ್ಲ. ಆದರೆ ಆ ಮಚ್ಚೆಯನ್ನು ತೆಗಿಸಿದ ಮೇಲೆ ಪೂಜಾ ಗಾಂಧಿ ಯಾಕೋ ಯಾವ ಸಿನಿಮಾವು ಕೂಡ ಅವರ ಕೈ ಹಿಡಿಯಲಿಲ್ಲ. ರಾಜಕೀಯ ಕ್ಷೇತ್ರದಲ್ಲೂ ಕೂಡ ಹೆಸರು ಮಾಡಿಲಿಲ್ಲ.ಯಾಕಪ್ಪ ಪೂಜಾ ಗಾಂಧಿ ಕೆನ್ನೆ ಮೇಲಿರೋ ಮಚ್ಚೆಯ ಬಗ್ಗೆ ಮಾತಾಡುತ್ತಿದ್ದೀರಾ ಅನ್ಕೊಂಡ್ರ.. ಹೌದು..ರೀ… ಮತ್ತೆ ಅದೇ ಮಚ್ಚೆ ಇದೀಗ ಸುದ್ದಿ ಮಾಡಿದೆ ಸದ್ಯ ಮತ್ತೆ ಪೂಜಾ ಗಾಂಧಿ ಕೆನ್ನೆ ಮೇಲೆ ಆ ಮಚ್ಚೆ ಬಂದಿದ್ಯಂತೆ.. ಮಚ್ಚೆ ಮೂಡಿಬಂದಿರುವುದರಿಂದ ಮತ್ತೆ ಪೂಜಾಗೇ ಅದೃಷ್ಟ ಒಲಿಯುವುದೇನೋ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮಚ್ಚೆಯಿಂದಾರರೂ ಪೂಜಾ ಗಾಂಧಿ ಅದೃಷ್ಬ ದಲಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
Comments