ಸತೀಶ್ ನೀನಾಸಂ ಗೆ ಇಂದು ಜನ್ಮದಿನ ಸಂಭ್ರಮ..

ಇಂದು ಸತೀಶ್ನಿನಾಸಂಗೆ ಹುಟ್ಟುಹಬ್ಬದ ಸಂಭ್ರಮ. ಇದೇ ಸಂದರ್ಭದಲ್ಲಿ ”ಅಯೋಗ್ಯ” ಸಿನಿಮಾದ ಟೀಸರ್ ಕೂಡ ಬಿಡುಗಡೆಗೆ ರೆಡಿಯಾಗಿದೆ. ಇಡೀ ಚಿತ್ರ ತಂಡ ನಾಕನ ನಟ ನಿನಾಸಂ ಸತೀಶ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.
ಅಂದಹಾಗೇ ಸಿನಿಮಾ ಬಿಡುಗಡೆಗೂ ಮುನ್ನವೇ ಸತೀಶ್ ನಿನಾಸಂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಹುಟ್ಟಿದ ಊರಿನಲ್ಲೇ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ, ಅಲ್ಲಿನ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಇದೀಗ ಮುಂದಾಗಿದ್ದಾರೆ. ನಿನಾಸಂ ಸತೀಶ್ ತಲೆಗೆ ಇಂತಹದ್ದೊಂದು ಕೆಲಸ ಮಾಡುವ ಯೋಚನೆ ಮೊದಲಿನಿಂದಲೂ ಇತ್ತಂತೆ. ಅದನ್ನು ತವರೂರುನಿಂದಲೇ ಆರಂಭ ಮಾಡಬೇಕು ಎಂದು ಸತೀಶ್ ತೀರ್ಮಾನಿಸಿ ತವರಿನಲ್ಲೇ ಇರುವಂತಹ ಹುಲ್ಲೆಗಾಲ ಗ್ರಾಮವನ್ನುದತ್ತು ತೆಗೆದುಕೊಂಡಿದ್ದಾರೆ. ಈಗಾಗಲೇ ಅಲ್ಲಿ ಕೆಲ ಸದಸ್ಯರು ಕೆಲಸ ಕಾರ್ಯಗಳನ್ನು ಶುರು ಮಾಡಿದ್ದಾರೆ.
Comments