ಕನ್ನಡ ಬಿಗ್ ಬಾಸ್ 6  ಗೆ ಬರಲಿದ್ದಾರೆ ಈ ಸೆಲಬ್ರೆಟಿಗಳು..!

20 Jun 2018 1:49 PM | Entertainment
3633 Report

ಕಿರುತೆರೆಯಲ್ಲಿಯೇ  ಬಿಗ್ ಬಾಸ್  ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಎಲ್ಲರಿಗೂ ಕೂಡ ತಿಳಿದೆ ಇದೆ. ಬಿಗ್ ಬಾಸ್ ಸೀಸನ್ 5 ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.

ಇದೀಗ ಬಿಗ್ ಬಾಸ್ ಸೀಸನ್ 6ಗೆ ಬೇಕಾದ ಎಲ್ಲ ರೀತಿಯ ಸಕಲ ಸಿದ್ದತೆಗಳು ಕೂಡ ನಡೆಯುತ್ತಿದೆ. ಈ ಸೀಜನ್ ನಲ್ಲಿ ಯಾವ  ಸ್ಪರ್ಧಿಗಳು ಬರುತ್ತಾರೆ ಅನ್ನೋ ಮಾತುಗಳು ಇದೀಗ ಕೇಳಿ ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ಹೆಸರುಗಳು ಕೇಳಿ ಬರುತ್ತಿವೆ. ಪುಟ್ಟಗೌರಿ ರಂಜಿನಿ, ನಟ ಕೋಮಲ್, ನಟ ಅನಿರುದ್ದ್, ನಟಿ ವಿಜಯಲಕ್ಷ್ಮಿ, ನಿರ್ದೇಶಕ ನಾಗಶೇಖರ್, ನಟಿ ನೇಹಾ, ಹ್ಯಾಸ ನಟ ಮಂಡ್ಯ ರಮೇಶ್, ರಿಯಾಲಿಟಿ ಶೋ ಸಿಂಗರ್ ಚೆನ್ನಪ್ಪ ಹಾಗೂ ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ನಟ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಸೀಜನ್ 6 ಆರಂಭವಾದ ನಂತರ ಯಾವ ಯಾವ ನಟ ನಟಿಯರು ಇರುತ್ತಾರೆ ಎಂಬುವುದು ಖಾತ್ರಿಯಾಗುತ್ತದೆ.

Edited By

Manjula M

Reported By

Manjula M

Comments