8 ವರ್ಷಗಳ ಬಳಿಕ ತಿಳಿಯಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದ ಈ ಸಹಾಯ..!

ದರ್ಶನ್ ಅಂದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ದರ್ಶನ್ ಇಂದು ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕೂಡ ತಮ್ಮ ಸರಳ ಹಾಗೂ ನೇರ ನಡೆ-ನುಡಿಗಳಿಂದಲೇ ಅಭಿಮಾನಿಗಳಿಗೆ ಅಚ್ಚುಮೆಚ್ಚಾಗಿದ್ದಾರೆ. ಅಷ್ಟೇ ಅಲ್ಲ, ಸಂಕಷ್ಟದಲ್ಲಿರುವವರಿಗೂ ಕೂಡ ಸ್ಪಂದಿಸುವುದರಲ್ಲೂ ದರ್ಶನ್ ಎತ್ತಿದ ಕೈ ಅನ್ನೋದು ಎಲ್ಲರಿಗೂ ಕೂಡ ಗೊತ್ತು. ಇದಕ್ಕೆ ಉದಾಹರಣೆ ಅಂದರೆ ಎಂಟು ವರ್ಷಗಳ ಹಿಂದೆ ಮಾಡಿರುವ ಸಹಾಯ.. ಅದು ಇತ್ತಿಚಿಗೆ ಬಹಿರಂಗವಾಗಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟರಾದ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಫೇಸ್ಬುಕ್ ನಲ್ಲಿ ಎಂಟು ವರ್ಷಗಳ ಘಟನೆ ಕುರಿತು ಬರೆದಿದ್ದಾರಲ್ಲದೇ ದರ್ಶನ್ 'ದೇವರಂಥ ಮನುಷ್ಯ' ಎಂದು ಕೂಡ ವರ್ಣಿಸಿದ್ದಾರೆ. ಅಷ್ಟಕ್ಕೂ ದರ್ಶನ್ ಏನ್ ಮಾಡಿದ್ದಾರೆ ಅಂತ ಯೋಚನೆ ಮಾಡುತ್ತಿದ್ದೀರಾ.. ಮುಂದೆ ಓದಿ.
ಇದು ಅಶ್ವಥ್ ರವರು ತೀರಿಕೊಂಡ ದಿನ ನಡೆದಿರುವ ಘಟನೆ. ಅಂದು ಬೆಂಗಳೂರಿನಲ್ಲಿದ್ದ ದರ್ಶನ್, ಹಿರಿಯ ನಟ ಅಶ್ವಥ್ ರ ಅಂತಿಮ ದರ್ಶನಕ್ಕಾಗಿ ಬಂದಿದ್ದರು. ಆ ಸಂದರ್ಭದಲ್ಲಿ ಯಾರಿಗೂ ಗೊತ್ತಾಗದಂತೆ ತಮ್ಮ ಬಳಿ ಇದ್ದ ಹಣವನ್ನು ಶಂಕರ್ ಅಶ್ವಥ್ ಅವರಿಗೆ ನೀಡಿದ್ದರಂತೆ. ಇದು ಸ್ವತಃ ಶಂಕರ್ ಅಶ್ವಥ್ ರ ಗಮನಕ್ಕೂ ಕೂಡ ಬಂದಿರಲಿಲ್ಲ. ಮನೆಯಲ್ಲಿ ಹಿರಿಯರು ತೀರಿಕೊಂಡಾಗ ಕೈಕಾಲುಗಳು ಆಡುವುದಿಲ್ಲ. ಅದಕ್ಕೆ ಅನೇಕ ಕಾರಣಗಳು ಹಾಗೂ ಸಮಸ್ಯೆಗಳು ಕೂಡ ಇರುತ್ತವೆ. ಅದರಲ್ಲಿ ಎಷ್ಟೋ ಬಡವರ ಮನೆಯಲ್ಲಿ ಹಣದ ಸಮಸ್ಯೆ ಇರುತ್ತದೆ. ಅದರ ಬಗ್ಗೆ ಹಲವರು ಹೆಚ್ಚು ಗಮನ ಕೊಡುವುದಿಲ್ಲ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಶಂಕರ್ ಅಶ್ವಥ್, ಇಂತಹ ಸಂದರ್ಭದಲ್ಲಿ ದರ್ಶನ್ ಹಣ ಕೊಟ್ಟಿದ್ದರೆಂಬುದನ್ನು ನೆನಪಿಸಿಕೊಂಡಿದ್ದಾರೆ. ದರ್ಶನ್ ಅಂದು ಹಣ ಕೊಟ್ಟಿದ್ದು ಬಹಳ ದಿನಗಳ ನಂತರ ವಿಡಿಯೋ ನೋಡಿದಾಗ ಶಂಕರ್ ಅಶ್ವತ್ ರಿಗೆ ನೆನಪಿಗೆ ಬಂದಿದೆ. ಈ ಕುರಿತು ದರ್ಶನ್ ಅವರ ಬಳಿ ಒಮ್ಮೆ ಕೇಳಿದಾಗ, ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ರ ಕಡೆಗಾಲದಲ್ಲಿ ನೋಡಲು ಹೆಚ್ಚು ಬಂದಿದ್ದು ಅಶ್ವತ್ಥ್ ಅಂಕಲ್ ಹಾಗಾಗಿ ಆ ಋಣ ತೀರಿಸಲು... ಎಂದು ಹೇಳಿದ್ದರಂತೆ ಇದನ್ನು ಈಗಲೂ ಕೂಡ ಶಂಕರ್ ಅಶ್ವಥ್ ನೆನಪಿಸಿಕೊಳ್ಳುತ್ತಾರೆ.
Comments