1.5 ಲಕ್ಷ ನೀಡಿ ಫ್ಯಾನ್ಸಿ ನಂಬರ್ ಖರೀದಿಸಿದ ರಾಕಿಂಗ್ ಸ್ಟಾರ್..!

ಶಾಂತಿನಗರದ ಟಿಟಿಎಂಸಿ ಕಟ್ಟದಲ್ಲಿರುವ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದಂತಹ ಕೆಎ 05-ಎಂ ವೈ ಫ್ಯಾನ್ಸಿ ನೋಂದಣಿ ಸಂಖ್ಯೆಯ ಹರಾಜಿನಲ್ಲಿ 9999 ನೋಂದಣಿ ಸಂಖ್ಯೆ ಅಧಿಕ ಮೊತ್ತ 4.26 ರೂ ಲಕ್ಷ ಗೆ ಹರಾಜಾಗಿದೆ. 1.47 ಲಕ್ಷ ರೂ. ನೀಡಿ ಚಿತ್ರನಟ ಯಶ್ ಅವರು 8055 ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.
27 ಫ್ಯಾನ್ಸಿ ನಂಬರ್‌ಗಳು ಹರಾಜಾಗಿವೆ, ಸಾರಿಗೆ ಇಲಾಖೆಗೆ ಸರಿ ಸುಮಾರು 40 ಲಕ್ಷ ರೂ.ಆದಾಯವು ಬಂದಿದೆ. ಈ 27 ಸಂಖ್ಯೆಗಳ ಪೈಕಿ 9000(2.85 ಲಕ್ಷ ರು.), 6666 (1.85 ಲಕ್ಷ ರು.), 0001 (2.86 ಲಕ್ಷ ರು.), 0009 (1.69 ಲಕ್ಷ ರು.), 0003 (1.15 ಲಕ್ಷ ರು.), 0007 (1.11 ಲಕ್ಷ ರು.) ಸಂಖ್ಯೆಗಳನ್ನು ಖರೀದಿಸಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ 8055 ನೋಂದಣಿ ಸಂಖ್ಯೆಗೆ ಆರಂಭಿಕ ಠೇವಣಿ 75 ಸಾವಿರ ರೂ. ಇತ್ತು. ನಂತರ ಆರಂಭಗೊಂಡ ಹರಾಜಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಸದಾಗಿ ಖರೀದಿ ಮಾಡಿರುವ ಬೆಂಜ್ ಕಾರಿಗೆ ಈ ನೋಂದಣಿ ಸಂಖ್ಯೆಯನ್ನು 72 ಸಾವಿರ ರೂ.ಗೆ ಹರಾಜು ಕೂಗಿ ಫ್ಯಾನ್ಸಿ ನಂಬರ್ ಅನ್ನು ತಮ್ಮದಾಗಿಸಿಕೊಂಡರು. ಮತ್ತು 75 ಸಾವಿರ ಠೇವಣಿ ಸೇರಿದಂತೆ ಒಟ್ಟಾರೆಯಾಗಿ 1.47 ಲಕ್ಷ ರೂ ನೀಡಿ ಯಶ್ ಫ್ಯಾನ್ಸಿ ನಂಬರ್ ಅನ್ನು ಪಡೆದುಕೊಂಡರು.
Comments