ವಿವಾದಕ್ಕೆ ಕಾರಣವಾದ ದುನಿಯಾ ವಿಜಯ್ ಮಗನ ಸಿನಿಮಾದ ಟೀಸರ್! ಅಷ್ಟಕ್ಕೂ ಟಾಂಗ್ ಕೊಟ್ಟಿದ್ದು ಯಾವ ನಟನಿಗೆ ಗೊತ್ತಾ?

ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ನಾಯಕರುಗಳೇ ಒಬ್ಬರಿಗೊಬ್ಬರು ಟಾಂಗ್ ಕೊಟ್ಟುಕೊಂಡು ವಿವಾದಕ್ಕೆ ಗುರಿಯಾಗುತ್ತಿರುತ್ತಾರೆ.
ಡೈಲಾಗ್ ಹೇಳೋದು ಹೇಳಿ, ಆಮೇಲೆ ಅದಕ್ಕೂ ತಮಗೂ ಯಾವುದೆ ಸಂಬಂಧವಿಲ್ಲ, ಡೈರೆಕ್ಟರ್ ಹೇಳಿ ಕೊಟ್ಟಂತಹ ಸಂಭಾಷಣೆಯನ್ನು ಮಾತ್ರ ನಾವು ಹೇಳ್ತೀವಿ ಅಂತ. ಇದೆಲ್ಲವು ಕೂಡ ಸಿನಿಮಾ ಪಬ್ಲಿಸಿಟಿಯ ಸಲುವಾಗಿ ಇವರು ಈ ರೀತಿ ಡೈಲಾಗ್ ಹೊಡೆಯುತ್ತಾರೆ. ಕೊನೆಗೆ ಸಿನಿಮಾಕ್ಕೆ ಒಳ್ಳೆ ಪಬ್ಲಿಸಿಟಿ ಕೂಡ ಸಿಗುತ್ತದೆ. ಈ ನಡುವೆ ಸ್ಯಾಂಡಲ್ ವುಡ್ ಗೆ ಕಾಲಿಡಲು ಸಿದ್ದವಾಗುತ್ತಿರುವ ನಟ ದುನಿಯಾ ವಿಜಯ್ ಮಗ ಸಾಮ್ರಾಟ್ ಅಭಿನಯಿಸಿಲಿರುವ ಕುಸ್ತಿ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನಲ್ಲಿ ನಟ ಕಿಚ್ಚ ಸುದೀಪ್ ಗೆ ಟಾಂಗ್ ನೀಡುವ ಡೈಲಾಗ್ ಇದ್ದು, ಇದು ಸುದೀಪ್ ಅಭಿಮಾನಿಗಳನ್ನು ರೊಚ್ಚಿಗೇಳಿಸುವಂತೆ ಮಾಡುತ್ತಿದೆ.
Comments