ಟಾಲಿವುಡ್ ಗೆ ಎಂಟ್ರಿ ಕೊಟ್ಟ ಡಾಲಿ ಧನಂಜಯ್ ..! ಖಡಕ್ ಲುಕ್ ನಲ್ಲಿ 'ಭೈರವ'ನ ದರ್ಶನ

ಟಗರು ಚಿತ್ರದ ಮೂಲಕ ಡಾಲಿ ಧನಂಜಯ್ ಅಂತಾನೆ ಫೇಮಸ್ ಆಗಿರುವ ಧನಂಜಯ್ ಸ್ಯಾಂಡಲ್ ವುಡ್ ನ ಸ್ಪೆಷಲ್ ಸ್ಟಾರ್ ಆಗಿದ್ದಾರೆ. ಡಾಲಿ ಧನಂಜಯ ಅಭಿನಯ ಮಾಡುತ್ತಿರುವ ಮೊದಲ ತೆಲುಗು ಸಿನಿಮಾ ಭೈರವ ಗೀತಾ.
ನಟ ಧನಂಜಯ ಇತ್ತೀಚಿಗಷ್ಟೆ ರಾಮ್ ಗೋಪಾಲ್ ವರ್ಮ ಅವರನ್ನು ಭೇಟಿ ಮಾಡಿಕೊಂಡು ಬಂದಿದ್ದರು. ಸಿನಿಮಾ ಟೈಟಲ್ 'ಭೈರವ-ಗೀತಾ' ಆಗುವ ಸಾಧ್ಯತೆಗಳಿವೆ ಎಂಬ ಸುಳಿವನ್ನು ಕೂಡ ನೀಡಿದ್ದಾರೆ. ಆದರೆ ಇದೀಗ ಚಿತ್ರದಲ್ಲಿನ ಧನಂಜಯ ಲುಕ್ ರಿವಿಲ್ ಆಗಿದೆ. ಟಾಲಿವುಡ್ ನಲ್ಲಿ ಡಾಲಿ ಧನಂಜಯ್ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು ಧನಂಜಯ ಕೈನಲ್ಲಿ ಕೊಡಲಿ ಹಿಡಿದುಕೊಂಡಿರುವ ಫೋಟೋಗಳನ್ನ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮ ಟ್ವಿಟ್ಟರ್ ಮೂಲಕ ಬಿಡುಗಡೆಯನ್ನು ಮಾಡಿದ್ದಾರೆ. ಭಾಸ್ಕರ್ ರಿಷಿ ಹಾಗೂ ರಾಮ್ ಗೋಪಾಲ್ ವರ್ಮ ಸೇರಿ 'ಭೈರವ-ಗೀತಾ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ಸಿನಿಮಾದ ಫಸ್ಟ್ ಲುಕ್ ಅನ್ನು ಇದೇ ತಿಂಗಳ 21 ರಂದು ಬಿಡುಗಡೆ ಮಾಡಲಿದೆ ಚಿತ್ರ ತಂಡ.
Comments