ಕರ್ನಾಟಕದ ಕ್ರಶ್ ಗೆ ಸವಾಲಾಕಿದ ಕರ್ಣ..!

16 Jun 2018 4:02 PM | Entertainment
424 Report

ಇದೀಗ ದೇಶದಲ್ಲಿ ಫಿಟ್ನೆಸ್ ಚಾಲೆಂಜ್ ಹವಾ ಜೋರಾಗಿಯೇ ಕೇಳಿ ಬರುತ್ತಿದೆ. ಇದರೆ ನಡುವೆ ಸ್ಯಾಂಡಲ್ ವುಡ್ ನಲ್ಲಿ ಕೂಡ ಫಿಟ್ನೆಸ್ ಹವಾ ಜೋರಾಗಿಯೇ ಬೀಸಿದೆ. ಸುದೀಪ್. ಪುನೀತ್ ಸೇರಿದಂತೆ ಅನೇಕ ಮಂದಿ ನಟ ನಟಿಯರು ಹಾಕುತ್ತಿದ್ದಾರೆ.

ಇದರ ನಡುವೆ ಪವರ್ ಸ್ಟಾರ್‌ ಪುನೀತ್‌ ನೀಡಿದ ಚಾಲೆಂಜ್‌ನ್ನು ನಟ ರಕ್ಷಿತ್ ಶೆಟ್ಟಿ ಸ್ವೀಕರಿಸಿದ್ದಾರೆ. ಪುನೀತ್ ಹಾಕಿದ್ದ ಚಾಲೆಂಜ್ ಸ್ವೀಕರಿಸಿರುವ ರಕ್ಷಿತ್  ಶೆಟ್ಟಿ , ಸಖತ್ ಸ್ಪೆಷಲ್ ಆಗಿ ವರ್ಕೌಟ್‌ ಮಾಡಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಯಲ್ಲಿ ತಮ್ಮ ಮುಂದಿನ ಸಿನಿಮಾದ ಕೋ ಸ್ಟಾರ್ ಶ್ವಾನ ಚಾರ್ಲಿ ಕೂಡ ವರ್ಕೌಟ್ ಮಾಡಿದ್ದಾರೆ. ಈ ಫಿಟ್ನೆಸ್‌ ಚಾಲೆಂಜ್‌ನ್ನು ರಿಷಭ್‌ ಶೆಟ್ಟಿ, ನಟಿ ಮೇಘನಾ ಗಾಂವಕರ್‌ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ನೀಡಿದ್ದಾರೆ. ತಮ್ಮ ಭಾವಿ ಪತಿಗೆ ನೀಡಿರುವ ಸವಾಲನ್ನು ಕರ್ನಾಟಕದ ಕ್ರಶ್ ಕಿರಿಕ್ ಬೆಡಗಿ ರಶ್ಮಿಕಾ ಸ್ವೀಕರಿಸಿದ್ದಾರೆ.

Edited By

Manjula M

Reported By

Manjula M

Comments