'ಕಾನ್ಸ್ ಟೇಬಲ್ ಸರೋಜ'ಳ ಬದುಕು ಬದಲಿಸಿದ್ದು ದೇವರು..!
ಟಗರು ಚಿತ್ರದಲ್ಲಿ ಕಾನ್ಸ್ ಟೇಬಲ್ ಸರೋಜ ಆಗಿದ್ದ ನಟಿ ತ್ರಿವೇಣಿ ಬದುಕಿನಲ್ಲಿ ಒಂದು ದೊಡ್ಡ ಬದಲಾವಣೆ ಆಗಿದೆ.ಕಾನ್ಸ್ ಟೇಬಲ್ ಸರೋಜ ಈ ಹೆಸರು ಕೇಳಿದ ತಕ್ಷಣ ಸಿನಿಮಾ ಅಭಿಮಾನಿಗಳ ಕಿವಿ ನೆಟ್ಟಗಾಗೋದು ಖಂಡಿತಾ. ಅಷ್ಟರ ಮಟ್ಟಿಗೆ ಈಕೆ ತನ್ನ ಅಭಿನಯದ ಮೂಲಕವೇ ಸಿನಿ ಪ್ರೇಕ್ಷಕರ ಮನಸನ್ನು ಗೆದ್ದಿದ್ದರು.
ತ್ರಿವೇಣಿ ಬದುಕನ್ನು ಬದಲಾಯಿಸಿರೋದು ಯಾರು ಅಂತೀರಾ.. ಅವರೆ ದೇವರು .. ಅದನ್ನ ನೀವು ನಂಬಲೇ ಬೇಕು. ಎಸ್.. ನಟಿ ತ್ರಿವೇಣಿ ದೇವರ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ತೆಲುಗಿನ ಭಕ್ತಿ ಪ್ರಧಾನ ಸಿನಿಮಾದಲ್ಲಿ ತ್ರಿವೇಣಿಅವರು ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಪಾತ್ರಕ್ಕೆ ಸರಿ ಹೊಂದುತ್ತಾರಾ ಎನ್ನುವುದನ್ನ ತಿಳಿದುಕೊಳ್ಳಲು ದೇವಿಯ ಕಾಸ್ಟ್ಯೂಮ್ಸ್ ನಲ್ಲಿ ಕ್ಯಾಮೆರಾಗೆ ಪೋಸ್ ಕೂಡ ಕೊಟ್ಟಿದ್ದಾರೆ. ಈ ಪಾತ್ರಕ್ಕೆ ಅವರು ಒಪ್ಪುತ್ತಾರ.. ಒಪ್ಪಿದರೇ ಸಿನಿಮಾ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಲೇ ಬೇಕು.
Comments