ಬಾಲಿವುಡ್ ಅಂಗಳದಲ್ಲಿ ಮಿಂಚಲಿದ್ದಾರಾ ಮುಗುಳುನಗೆ ನಟಿ..?
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರ ಕಳೆದ ವರ್ಷವಷ್ಟೆ ಮುಗುಳುನಗೆ ಚಿತ್ರವು ತೆರೆಕಂಡಿತ್ತು. ಕಳೆದ ವರ್ಷ ಚಂದನವನದಲ್ಲಿ ಸಾಕಷ್ಟು ಸುದ್ದಿ ಮಾಡಿದ ಸಿನಿಮಾದಲ್ಲಿ ಮೂವರು ನಾಯಕಿಯರು ಅಭಿನಯಿಸಿದ್ದರೂ ಪ್ರತಿ ನಾಯಕಿಯರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನವನ್ನು ಸೆಳೆದಿದ್ದರು. ಒಂದೇ ಒಂದು ಹಾಡಿನ ಅಭಿನಯದಿಂದಲೇ ಸಿನಿಪ್ರೇಮಿಗಳ ಮನಸ್ಸನ್ನು ಕದ್ದ ನಟಿ ಅಂದರೆ ಅದು ನಿಖಿತಾ ನಾರಾಯಣ್ .
ನಿಖಿತಾ ನಾರಾಯಣ್ 'ಮುಗುಳುನಗೆ' ಸಿನಿಮಾ ನಂತರ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಸರಾಂತ ನಿರ್ದೇಶಕ ಪ್ರಕಾಶ್ ಝಾ ಅವರನ್ನು ಭೇಟಿ ಮಾಡಿ ಬಂದಿದ್ದಾರಂತೆ ನಟಿ ನಿಖಿತಾ ನಾರಾಯಣ್ . ತಮ್ಮ ಫೇಸ್ ಬುಕ್ ನಲ್ಲಿ ಪ್ರಕಾಶ್ ಝಾ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿರುವ ನಿಖಿತಾ ಅದರ ಜೊತೆಯಲ್ಲಿ ನಿರ್ದೇಶಕರನ್ನ ಬೇಟಿ ಮಾಡಿದ ಅನುಭವದ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. ಸದ್ಯ ಯಾವುದೇ ರೀತಿಯ ಸುಳಿವನ್ನು ನೀಡದ ನಿಖಿತಾ ಮುಂದಿನ ದಿನಗಳಲ್ಲಿ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಇಲ್ಲವೋ ಎಂಬುದನ್ನುಕಾದು ನೋಡಲೇಬೇಕು.
Comments