ನನ್ನ ಮುಂದಿನ ಸಿನಿಮಾದ ಹೆಸರನ್ನು ಅಭಿಮಾನಿಗಳೇ ಸೂಚಿಸಲಿ- ರೋರಿಂಗ್ ಸ್ಟಾರ್ ಶ್ರೀಮುರುಳಿ

ಉಗ್ರಂ,ರಥಾವರ ಚಿತ್ರದ ನಟ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರ ಅಭಿನಯದ ಹೊಸ ಚಿತ್ರದ ಬಗ್ಗೆ ಇನ್ನೂ ಯಾವುದೆ ಸುದ್ದಿ ಬಂದಿಲ್ಲ ಎಂದು ಯೋಚನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿಯೊಂದನ್ನು ನೀಡಿದ್ದಾರೆ. ಸದ್ಯದಲ್ಲೆ ಅವರ ಅಭಿನಯದ ಹೊಸ ಚಿತ್ರ ಆರಂಭವಾಗುತ್ತಿದೆ.
ಆ ಚಿತ್ರಕ್ಕೆ ಸೂಕ್ತ ಶಿರ್ಷಿಕೆಯನ್ನು ಸೂಚಿಸುವಂಥಹ ಅವಕಾಶವನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಬಹದ್ದೂರ್ ಚೇತನ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಹೆಸರನ್ನು ಯಾರು ಬೇಕಾದರೂ ಸೂಚಿಸಬಹುದಾಗಿದೆ . ಜೋರು ಎಂಬ ಪದಕ್ಕೆ ಇರುವ ಇನ್ನೊಂದು ಹೆಸರೇ ಶ್ರೀ ಮುರುಳಿ, ತಮ್ಮ ಮುಂದಿನ ಚಿತ್ರ ಟೈಟಲ್ ಏನಿರಬಹುದು ಅಂತ ಅಭಿಮಾನಿಗಳೇ ಗೆಸ್ ಮಾಡಲಿ ಎಂದು ಪೇಸ್ ಬುಕ್ ನಲ್ಲಿ ನಟ ಶ್ರೀ ಮುರುಳಿ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದಾರೆ.
Comments