ಮೂರು ವರ್ಷಗಳ ನಂತರ ಟ್ರೆಂಡ್ ಕ್ರಿಯೆಟ್ ಮಾಡಿದ ರನ್ನ ಸಿನಿಮಾ..! ಕಾರಣ ಏನ್ ಗೊತ್ತಾ?
ಅಭಿನಯ ಚಕ್ರವರ್ತಿ ಸುದೀಪ್ ನಟನೆಯ 'ರನ್ನ' ಸಿನಿಮಾ ಜೂನ್ 2015ರಲ್ಲಿ ರಿಲೀಸ್ ಆಗಿದೆ ಆದರೆ ಈ ಸಿನಿಮಾ ಈಗ ಟ್ರೆಂಡ್ ಕ್ರಿಯೆಟ್ ಮಾಡ್ತಿದೆ. ಆಶ್ಚರ್ಯ ಅನ್ನಿಸಬಹುದು ಆದರೂ ಕೂಡ ಇದು ನಿಜ. ಮೂರು ವರ್ಷಗಳ ಬಳಿಕವೂ ಇದೀಗ ಸಾಮಾಜಿಕ ಜಾಲತಾಣದಲ್ಲಿ 'ರನ್ನ' ಸಿನಿಮಾ ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ.
'ರನ್ನ' ಸಿನಿಮಾ ಯೂ ಟ್ಯೂಬ್ ನಲ್ಲಿ ಈಗ ಟ್ರೆಂಡಿಂಗ್ 5ನೇ ಸ್ಥಾನದಲ್ಲಿ ಇದೆ. ವಿಶೇಷ ಅಂದರೆ, 'ರನ್ನ' ಹೊರತು ಪಡಿಸಿ ಸದ್ಯ ಯೂ ಟ್ಯೂಬ್ ನಲ್ಲಿ ಟಾಪ್ 10 ಟ್ರೆಂಡಿಂಗ್ ನಲ್ಲಿ ಯಾವ ಕನ್ನಡ ಸಿನಿಮಾದ ಹಾಡು, ಟ್ರೇಲರ್, ಟೀಸರ್ ಕೂಡ ಇಲ್ಲ. ರನ್ನ ಸಿನಿಮಾ ಕೌಟುಂಬಿಕ ಕಥೆಯ ಹಿನ್ನಲೆಯನ್ನು ಹೊಂದಿರುವ ಕಮರ್ಷಿಯಲ್ ಸಿನಿಮಾವಾಗಿದೆ. ಅಭಿಮಾನಿಗಳು ಈ ಸಿನಿಮಾವನ್ನು ಈಗಲೂ ಕೂಡ ಇಷ್ಟ ಪಟ್ಟು ನೋಡುತ್ತಾರೆ. ಅದೇ ಕಾರಣದಿಂದ ಮೂರು ವರ್ಷದ ಹಿಂದಿನ ಸಿನಿಮಾ ಇದೀಗ ಟ್ರೆಂಡ್ ಆಗಿರೋದು.
Comments