ಕೊನೆಗೂ ಸಿಕ್ಕಿ ಬಿದ್ದ ರಾಧರಮಣದ ಕಳ್ಳಿ:ಕಥೆಯಲ್ಲಿ ತಿರುಚಿದ ರೋಚಕ ಟ್ವಿಸ್ಟ್..!
ರಾಧರಮಣ ಧಾರವಾಹಿ ನೋಡುಗರ ಡೌಟ್ ಗೆ ಕೊನೆಗೂ ಕ್ಲಾರಿಟಿ ಸಿಕ್ಕಿದೆ. ಕೊನೆಗೂ ವೀಕ್ಷಕರ ಊಹೆ ನಿಜವಾಗಿ ಬಿಟ್ಟಿದೆ. ಇಷ್ಟು ದಿನ ಧಾರವಾಹಿ ನೋಡುತ್ತಿದ್ದವರು ಆಕೆ ನಿಜವಾದ 'ಅವನಿ'ಯೋ, ಅಲ್ಲವೋ ಅಂತ ತಲೆಗೆ ಹುಳ ಬಿಟ್ಟುಕೊಂಡವರಿಗೆ ಇದೀಗ ಸ್ಪಷ್ಟನೆ ಸಿಕ್ಕಂತೆ ಆಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವಂತಹ 'ರಾಧಾ ರಮಣ' ಧಾರಾವಾಹಿಯಲ್ಲಿ ಅವನಿ ಅಧ್ಯಯನ ಶುರುವಾಗಿ ತುಂಬಾ ದಿನಗಳೇ ಕಳೆದಿವೆ. ಆಶಿತಾ ಚಂದ್ರಪ್ಪ 'ಅವನಿ' ಪಾತ್ರಧಾರಿಯಾಗಿ ರಾಧ ರಮಣ ಧಾರವಾಹಿಯಲ್ಲಿ ಎಂಟ್ರಿಕೊಟ್ಟಿದ್ದರು.. ಇದೀಗ ಧಾರಾವಾಹಿಯಲ್ಲಿ ಆಶಿತಾ ಚಂದ್ರಪ್ಪ ನಿಜವಾದ 'ಅವನಿ' ಅಲ್ಲ ಬದಲಾಗಿ ಅವಳು ಕಳ್ಳಿ ಪಾತ್ರಧಾರಿ ಎಂಬ ರೋಚಕ ತಿರುವು ಸಿಕ್ಕಿದೆ.ಅಷ್ಟೆ ಅಲ್ಲದೆ, ಆಕೆ 'ಅವನಿ' ಅಲ್ಲ 'ರಾಣಿ' ಎಂಬ ಸತ್ಯ ಗೊತ್ತಾಗಿರುವುದು ಸಿತಾರಾ ದೇವಿ ಪುತ್ರಿ ದೀಪಿಕಾಗೆ. ಇಷ್ಟು ದಿನ ಮಗಳಿಂದಲೂ, ಸತ್ಯ ಬಚ್ಚಿಟ್ಟಿದ್ದ ಸಿತಾರಾ ದೇವಿ ಈಗ ಮಗಳ ಕೈಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಕೆಲವೊಂದು ಧಾರಾವಾಹಿಗಳಿಗೆ ಸ್ವಾಮೀಜಿ ಹಾಗೂ ಕೊರವಂಜಿಗಳೇ ದಿಕ್ಸೂಚಿಗಳಾಗಿ ಬಿಟ್ಟಿದ್ದಾರೆ. ಅದೇ ರೀತಿ 'ರಾಧಾ ರಮಣ' ಸೀರಿಯಲ್ ನಲ್ಲೂ ಇದೆ ಮುಂದುವರೆದಿದೆ. ದೀಪಿಕಾಗೆ ಆಕೆ 'ಅವನಿ' ಅಲ್ಲ 'ರಾಣಿ' ಎಂಬ ಸತ್ಯವು ಕೂಡ ಗೊತ್ತಾಗಿದೆ. ರಾಣಿ ದೊಡ್ಡ ಕಳ್ಳಿ, ಓರ್ವ ಕಾನ್ ಆರ್ಟಿಸ್ಟ್ ಎಂಬ ಸಂಗತಿಯೂ ಇದೀಗ ದೀಪಿಕಾ ಅರಿವಿಗೆ ಬಂದಿದೆ. ತಾಯಿಯ ಪ್ಲಾನ್ ಇದೀಗ ಮಗಳಿಗೂ ಕೂಡ ಗೊತ್ತಾಗಿದೆ. ಅಂತೂ ಇಂತೂ 'ರಾಧಾ ರಮಣ' ಧಾರಾವಾಹಿಯಲ್ಲಿ ನಿಜವಾದ 'ಅವನಿ'ಯ ದರ್ಶನ ವೀಕ್ಷಕರಿಗೆ ಆಗಿದೆ.
Comments