ಇದಪ್ಪ ಅಭಿಮಾನ ಅಂದ್ರೆ..!ಅಪ್ಪು ನಟಸಿದ ಸಿನೆಮಾ ಹೆಸರುಗಳಿಂದಲೇ ತಯಾರಾದ ಮದುವೆ ವಿಶೇಷ ಆಮಂತ್ರಣ ಪತ್ರಿಕೆ!

ಸ್ಯಾಂಡಲ್ ವುಡ್ ನಲ್ಲಿರುವ ಸ್ಟಾರ್ ಗಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿರುತ್ತಾರೆ. ಆದರೆ ಡಿಫರೆಂಟ್ ಆಗಿ ಯೋಚನೆ ಮಾಡೋದು ಕೆಲವರು ಮಾತ್ರ. ಅಂತಹ ಅಭಿಮಾನಿಗಳಲ್ಲಿ ಅಪ್ಪು ಅಭಿಮಾನಿ ಕೂಡ ಒಬ್ಬರು. ಅಭಿಮಾನಿಗಳು ಕೆಲವೊಮ್ಮೆ ಮಾಡುವ ಚಮತ್ಕಾರಗಳಿಂದ ಸ್ಟಾರ್ ಗಳೇ ಬೆಚ್ಚಿ ಬೀಳುವಂತಾಗುತ್ತದೆ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಯೋಚನೆ ಮಾಡುತ್ತಾರೆ.ಅಂತಹದ್ದೇ ಒಂದು ಅನುಭವ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕೂಡ ಆಗಿದೆ. ಪವರ್ ಸ್ಟಾರ್ ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಅಪ್ಪು ಸಿನಿಮಾ ಹೆಸರುಗಳನ್ನು ಸೇರಿಸಿ ಮಾಡಿಸಿದ್ದಾರೆ.
ಮಾಗಡಿ ಮೂಲದ ನವೀನ್ ತಮ್ಮ ಮದುವೆ ಪತ್ರಿಕೆಯನ್ನು ವಿಶೇಷವಾಗಿ ಪ್ರಿಂಟ್ ಮಾಡಿಸಿದ್ದಾರೆ. ‘ಆಕಾಶ್’ ವೇ ಚಪ್ಪರ.. ‘ಪೃಥ್ವಿ’ಯೇ ಹಸೆಮಣೆ.. ಮದುವೆಯೇ ‘ಮಿಲನ’.. ಈ ನವೀನ ‘ಮೈತ್ರಿ’.. ಬದುಕಿಗೆ ‘ಹೊಸ ಬೆಳಕು’ ಪ್ರೀತಿ ‘ಪರಮಾತ್ಮ’ ನ ಸ್ಮರಿಸುತ್ತಾ.. ನಮ್ಮೆಲ್ಲರ ‘ಅಭಿ’ಮಾನದ ಆಶೀರ್ವಾದ ಬಯಸುತ್ತಿರುವ..’ಎರಡು ನಕ್ಷತ್ರಗಳು’ ನವೀನ್ ಕುಮಾರ್, ರಶ್ಮಿ…’ಬಿಂದಾಸ್’ ಆಗಿ ಬನ್ನಿ.. ಆರತಕ್ಷತೆಯ ‘ಅಪ್ಪು’ ಗೆ.. ಮುಹೂರ್ತದ ‘ಪವರ್’ ಹೀಗೆ ಅಪ್ಪು ಅಭಿನಯದ ಎಲ್ಲ ಸಿನಿಮಾ ಹೆಸರುಗಳನ್ನು ಬಳಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿವಾಹದ ಆಮಂತ್ರಣ ಪತ್ರಿಕೆಯು ವೈರಲ್ ಆಗಿದ್ದು ಟ್ವಿಟ್ಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಅಕೌಂಟ್ ನಿಂದ ನವ ಜೋಡಿಗಳಾದ ನವೀನ್ ಹಾಗೂ ರಶ್ಮಿ ಅವರಿಗೆ ಶುಭಾಷಯವನ್ನು ಕೋರಿದ್ದಾರೆ. ಅಂದ ಹಾಗೆ, ನವೀನ್ ಮತ್ತು ರಶ್ಮಿ ಮದುವೆ ಮಾಗಡಿ ಕಲ್ಯಾಣ ಮಂಟಪದಲ್ಲಿ ಇದೇ ತಿಂಗಳ ಅಂದರೆ ಜೂನ್ 17 ಮತ್ತು 18ರಂದು ನಡೆಯಲಿದೆ.ನೀವು ಕೂಡ ಮದುವೆಗೆ ಶುಭ ಆರೈಸಿ..
Comments