ಟಾಲಿವುಡ್ ಅಂಗಳದಲ್ಲಿ ಖಾತೆ ತೆರೆದ ಅಪ್ಪು..!
ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದರೆ ಒಂಥರಾ ಪವರ್ ಇದ್ದ ಹಾಗೆ. ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಇದುವರೆಗೆ ಅಪ್ಪು ಯಾವ ಸಿನಿಮಾ ಕೂಡ ಮಾಡಿಲ್ಲ. ಆದರೆ ಇದೀಗ ಟಾಲಿವುಡ್ ಮಾರುಕಟ್ಟೆಯಲ್ಲಿ ಪುನೀತ್ ಖಾತೆಯೊಂದನ್ನು ತೆರೆದಿದ್ದಾರೆ.
ಎಸ್..ಅಪ್ಪು ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಂತ ಅಪ್ಪು ತೆಲುಗಿನಲ್ಲಿ ಯಾವುದೇ ಸಿನಿಮಾವನ್ನು ಮಾಡುತ್ತಿಲ್ಲ. ಅದರ ಬದಲಿಗೆ ಅವರ ಪಿ ಆರ್ ಕೆ ಆಡಿಯೋ ಟಾಲಿವುಡ್ ನಲ್ಲಿ ಬಿಜಿನೆಸ್ ಅನ್ನು ಶುರು ಮಾಡಿದೆ. ಕನ್ನಡದ 'ಎಂ ಎಂ ಸಿ ಹೆಚ್' ಸಿನಿಮಾ ಇದೀಗ ತೆಲುಗಿನಲ್ಲಿ 'ರಿಯಲ್ ದಂಡುಪಾಳ್ಯ' ಎಂಬ ಹೆಸರಿನ ಮೂಲಕ ಡಬ್ ಆಗಿದೆ. ಈ ಚಿತ್ರದ ಹಾಡುಗಳು ಪುನೀತ್ ಒಡೆತನದ ಪಿ ಆರ್ ಕೆ ಆಡಿಯೋ ಮೂಲಕ ಹೊರ ಬಂದಿವೆ. ಹಾಗಾಗಿ, ಈ ಚಿತ್ರದ ತೆಲುಗು ಡಬ್ ಹಾಡುಗಳು ಹಾಗೂ ಟ್ರೇಲರ್ ಪಿ ಆರ್ ಕೆ ಆಡಿಯೋ ದಲ್ಲಿಯೇ ರಿಲೀಸ್ ಆಗಲಿದೆ. 'ಎಂ ಎಂ ಸಿ ಹೆಚ್' ಮುಸ್ಸಂಜೆ ಮಹೇಶ್ ನಿರ್ದೇಶನದ ಸಿನಿಮವಾಗಿದೆ. ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ, ಮೇಘನಾ ರಾಜ್, ನಕ್ಷತ್ರ, ಸಂಯುಕ್ತ ಬೆಳವಾಡಿ ಮತ್ತು ಪ್ರಾರ್ಥನಾ ಪ್ರಕಾಶ್ ನಟಿಸಿದ್ದಾರೆ.
Comments