ಕ್ರೇಜಿಸ್ಟಾರ್ ಪುತ್ರನ ‘ಚಿಲಂ’ ಚಿತ್ರದ ನ್ಯೂ ಮಾಸ್ ಲುಕ್

ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡುವುದು ತುಂಬಾ ಕಷ್ಟ. ಸಿನಿಮಾ ಹಿನ್ನಲೆ ಇದ್ದರೂ ಕೂಡ ಬಣ್ಣದ ಜಗತ್ತು ಕೈ ಹಿಡಿಯುವುದು ಕೆಲವರನ್ನು ಮಾತ್ರ. ಕ್ರೇಜಿ ಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಬೃಹಸ್ಪತಿ ಸಿನಿಮಾ ನಂತರ 'ಚಿಲಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಹಳೆಯ ವಿಚಾರ.
ಸದ್ಯ ಚಿತ್ರದ ಪಾತ್ರಕ್ಕಾಗಿ ಮನೋರಂಜನ್ ಹೊಸ ಲುಕ್ ನಲ್ಲಿ ಎಂಟ್ರಿಕೊಟ್ಟಿದ್ದಾರೆ. ಡ್ರಗ್ ಮಾಫಿಯಾ ಕುರಿತಾದ ಸಿನಿಮಾ ಇದಾಗಿದ್ದು ಮನೋರಂಜನ್ ಚಿತ್ರದಲ್ಲಿ ಡಿಫ್ರೆಂಟ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. 'ಚಿಲಂ' ಚಿತ್ರದ ನ್ಯೂ ಲುಕ್ ರಿಲೀಸ್ ಆಗಿದ್ದು ಮನೋರಂಜನ್ ಈ ಬಾರಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಸೂಚನೆ ಕೊಡುತ್ತಿದ್ದಾರೆ. ಈ ಚಿತ್ರವನ್ನು ಚಂದ್ರಕಲಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದ್ದು ಹದಿನಾಲ್ಕು ವರ್ಷದ ನಂತರ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಈ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಕೈನಲ್ಲಿ ಗನ್ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಮನೋರಂಜನ್ ಸಿನಿಮಾಗಾಗಿ ಗಡ್ಡ ಬಿಟ್ಟಿದ್ದಾರೆ. ಹೇರ್ ಸ್ಟೈಲ್ ಕೂಡ ಬದಲಾಗಿದೆ. ಹಿಂದೆ ನಟಿಸಿರುವ ಸಿನಿಮಾಗಳಿಗಿಂತಲೂ ವಿಭಿನ್ನವಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೋರಂಜನ್ ಜೊತೆ ಪ್ರಿಯಾಂಕ ತಿಮ್ಮೇಶ್ ಸ್ಕ್ರೀನ್ ಷೇರ್ ಮಾಡಲಿದ್ದಾರೆ. ಬಾಲಿವುಡ್ ನಟ ನಾನಾ ಪಾಟೇಕರ್ ಕೂಡ 'ಚಿಲಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ..
Comments