ದಚ್ಚು ಅವರನ್ನು ಅನುಸರಿಸಿದ ಅಭಿಮಾನಿಗಳು



ಅಭಿಮಾನಿಗಳೇ ಹಾಗೆ ತಾವು ಇಚ್ಚೆ ಪಡುವಂತಹ ಸ್ಟಾರ್ ಗಳು ಹೇಗೆ ನಡೆದುಕೊಳ್ಳುತ್ತಾರೋ ಅವರದೇ ಹಾದಿಯಲ್ಲಿ ನಡೆಯುತ್ತಾರೆ. ಎಲ್ಲಾ ವಿಚಾರದಲ್ಲಿಯೂ ಅವರನ್ನೇ ಅನುಸರಿಸಿಸಿ ನೆಡೆಯುತ್ತಾರೆ. ಸದ್ಯ ಈಗ ದರ್ಶನ್ ಅಭಿಮಾನಿಗಳು ಜಗ್ಗು ದಾದಾ ಅವರನ್ನು ಫಾಲೋ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ನಟ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಆಗಿ ಅರಣ್ಯ ಉಳಿಸಿ ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಸಿನಿಮಾ ಸ್ಟೈಲ್ ನಲ್ಲಿನ, ಡೈಲಾಗ್ ಗಳನ್ನು ಮಾತ್ರವಲ್ಲದೆ ಒಳ್ಳೆಯ ಕೆಲಸಗಳನ್ನು ಕೂಡ ಅಭಿಮಾನಿಗಳು ಅನುಸರಿಸುತ್ತಾರೆ ಎನ್ನುವುದಕ್ಕೆ ಇದೆ ಒಂದು ಉತ್ತಮ ಉದಾಹರಣೆ.
ಅಭಿಮಾನಿಗಳು ದರ್ಶನ್ ಅವರ ಹಾದಿಯಲ್ಲಿ ನೆಡೆದು ವನ ಮಾತೆಯ ರಕ್ಷಣೆಗಾಗಿ ಪಣತೊಟ್ಟಿದ್ದಾರೆ. ವಿಶೇಷ ಸಂದರ್ಭ ಸನ್ನಿವೇಶಗಳಲ್ಲಿ ಹೆಚ್ಚುವರಿ ವೆಚ್ಚಕ್ಕೆ ಬ್ರೇಕ್ ಹಾಕಿ ಮುಂದಿನ ಪೀಳಿಗೆಯ ಒಳಿತಿಗಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅರಣ್ಯ ರಕ್ಷಣೆಗಾಗಿ ದಾಸನ ಅಭಿಮಾನಿಗಳು ಮಾಡಿದ ಮಹಾನ್ ಕಾರ್ಯವೇನು? ಇಲ್ಲಿದೆ ನುರಿತ ಮಾಹಿತಿ ಮುಂದಕ್ಕೆ ಓದಿ....,
ಅಭಿಮಾನಿಗಳು ಮಾಡಿದ ಅರಣ್ಯ ಮಹೋತ್ಸವ
ಹಾಸನ್, ಮಂಡ್ಯ, ದಾವಣಗೆರೆ, ಶಿವಮೊಗ್ಗ, ದೊಡ್ಡಬಳ್ಳಾಪುರ, ಕುಣಿಗಲ್, ಕೆಂಗೇರಿ, ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ, ತಿಪಟೂರು, ಹುಬ್ಬಳ್ಳಿ, ಹಾಗೂ ಬೆಂಗಳೂರಿನಲ್ಲಿರುವ 'ಡಿ ಕಂಪನಿ'ಯ ಸದಸ್ಯರೆಲ್ಲರೂ ಸೇರಿ ಗಿಡಗಳನ್ನು ನೆಟ್ಟು ವನ ಮಹೋತ್ಸವದ ಆಚರಣೆ ಮಾಡಿದರು.
ಅಭಿಮಾನಿ ಬಳಗದಿಂದ ಗಿಡ ನೆಡುವ ಕಾರ್ಯಕ್ರಮ
ದರ್ಶನ್ ಅವರ ಅಭಿಮಾನಿ ಬಳಗ ಕಟ್ಟಿಕೊಂಡಿರುವ 'ಡಿ ಕಂಪನಿ' ಇತ್ತೀಚಿಗಷ್ಟೆ ಏಳು ವರ್ಷ ಪೂರೈಸಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಬೆಂಗಳೂರು ಸೇರಿದಂತೆ 11 ಸ್ಥಳಗಳಲ್ಲಿ ತಲಾ ನೂರು ಗಿಡಗಳನ್ನು ನೆಟ್ಟು ಸಂಭ್ರಮವನ್ನು ಆಚರಣೆ ಮಾಡಿದ್ದಾರೆ.
Comments